ಮಲೆನಾಡು ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಸಿಗುವ ಹಣ್ಣುಗಳಲ್ಲಿ ನೇರಳೆ ಹಣ್ಣು ಕೂಡ ಒಂದು. ಇದೀಗ ನೇರಲೆ ಹಣ್ಣು ಕೂಡ ಮಾರುಕಟ್ಟೆ ಸೃಷ್ಟಿಸಿದೆ. ನಗರ ಪ್ರದೇಶದ ಮಾರ್ಕೆಟ್ಗಳಲ್ಲಿ ನೇರಲೆ ಹಣ್ಣುಗಳು ಸಿಗುತ್ತಿವೆ.ಈ ಹಣ್ಣಿನಲ್ಲಿ ಕ್ಯಾಲ್ಸಿಯಂ, ಪೊಟ್ಯಾಷಿಯಂ, ಮೆಗ್ನೀಷಿಯಂ, ಪ್ರೊಟೀನ್, ಐರನ್, ವಿಟಮಿನ್ ಸಿ,ಬಿ, ಗ್ಲುಕೋಸ್ ಸೇರಿದಂತೆ ಮೊದಲಾದ ದೇಹಕ್ಕೆ ಬೇಕಾದ ಹಲವು ಪೋಷಕಾಂಶಗಳಿವೆ.
ಹೀಗಾಗಿ ಇದನ್ನು ತಿನ್ನುವುದರಿಂದ ಆರೋಗ್ಯಕಾರಿ ಪ್ರಯೋಜನಗಳನ್ನು ಪಡೆಯಬಹುದು. ನಿಯಮಿತವಾಗಿ ನೇರಳೆ ಹಣ್ಣಿನ ಸೇವನೆಯಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿಸಬಹುದು. ಈ ಹಣ್ಣಿನಲ್ಲಿ ಐರನ್ ಅಂಶ ಇರುವುದರಿಂದ ಇದು ರಕ್ತ ಶುದ್ಧ ಮಾಡುವಲ್ಲೂ ಪ್ರಮುಖ ಪಾತ್ರವಹಿಸುತ್ತದೆ.
ಮೊಡವೆ : ಹೆಚ್ಚಿನ ಪ್ರಮಾಣದಲ್ಲಿ ನೇರಳೆ ಹಣ್ಣು ತಿನ್ನುವುದರಿಂದ ಮುಖದ ಮೇಲೆ ಮೊಡವೆಗಳಿದ್ದರೆ ಖಂಡಿತವಾಗಿಯೂ ಈ ಹಣ್ಣಿನಿಂದ ಅಂತರ ಕಾಯ್ದುಕೊಳ್ಳಿ. ಇದು ಮೊಡವೆ ಸೇರಿದಂತೆ ಚರ್ಮದ ಸಮಸ್ಯೆಗಳು ಹೆಚ್ಚಾಗಬಹುದು.
ರಕ್ತದೊತ್ತಡ ಸಮಸ್ಯೆ : ರಕ್ತದೊತ್ತಡ ಕಡಿಮೆ ಮಾಡುವ ಸಲುವಾಗಿ ಈ ಹಣ್ಣನ್ನು ಅತಿಯಾಗಿ ತಿಂದರೆ ರಕ್ತದೊತ್ತಡ ತೀರಾ ಕಡಿಮೆಯಾಗಬಹುದು. ರಕ್ತದೊತ್ತಡ ಕಡಿಮೆಯಾದರೂ ಅದು ಆರೋಗ್ಯಕ್ಕೆ ಹಾನಿಕಾರಕ ಮಾತ್ರವಲ್ಲ ಪ್ರಾಣಕ್ಕೇ ಕುತ್ತು ತರಬಹುದು. ಅಧಿಕ ರಕ್ತದೊತ್ತಡ ರೋಗಿಗಳು ಈ ಹಣ್ಣನ್ನು ತಿಂದರೆ ಪ್ರಯೋಜನವಾಗುತ್ತದೆ ಎಂದು ಹೇಳಲಾಗುತ್ತದೆ. ನಿಮ್ಮ ದಿನನಿತ್ಯದ ಆಹಾರದಲ್ಲಿ ಈ ಹಣ್ಣನ್ನು ಸೇವಿಸುವ ಮೂಲಕ ರಕ್ತದೊತ್ತಡವನ್ನು ನೀವು ಸುಲಭವಾಗಿ ನಿಯಂತ್ರಿಸಬಹುದು.
ಮಲಬದ್ಧತೆ : ನೇರಳೆ ಹಣ್ಣು ಜಾಮೂನ್ ಜೀರ್ಣಕ್ರಿಯೆಯ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇದರ ಅತಿಯಾದ ಸೇವನೆಯಿಂದ ಮಲಬದ್ಧತೆಯ ಸಮಸ್ಯೆ ಕಾಣಿಸಿಕೊಳ್ಳಬಹುದು.