ಚಾಮರಾಜನಗರ: ಅನ್ನದಾತರು ಕೊಟ್ಟ ಮನವಿ ಪತ್ರಕ್ಕೆ ಕವಡೆ ಖಾಸಿನ ಕಿಮ್ಮತ್ತು ಇಲ್ಲಾ ಸಿಎಂ ಬಳಿ ಮನವಿ ಪತ್ರ ಕೊಟ್ರೆ ನಮ್ಮ ಕಷ್ಟ ಪರಿಹಾರ ಆಗುತ್ತೆ ಅನ್ನೋದು ಬರಿ ಭ್ರಮೆಯಷ್ಟೇಸಿಎಂಗೆ ತಮ್ಮ ಕಷ್ಟ ಹೇಳಿಕೊಂಡು ಮನವಿ ಪತ್ರ ನೀಡಿದ್ದ ರೈತರು ಹಾಗೂ ಆಕ್ಸಿಜನ್ ದುರಂತದ ಸಂತ್ರಸ್ಥರು ಆದ್ರೆ ಆ ಪತ್ರಗಳು ಹೋಗಿ ಸೇರಿದ್ದ ಕಸದ ರಾಶಿಗೆ ಮುಖ್ಯಮಂತ್ರಿ ಸ್ವೀಕರಿಸಿದ್ದ ಮನವಿ ಪತ್ರಗಳು ಕಸದ ರಾಶಿಯಲ್ಲಿ ಪತ್ತೆ
ಚಾಮರಾಜನಗರಕ್ಕೆ ಜು10 ರಂದು ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಕೃತಜ್ಞತಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸಿಎಂ ಈ ವೇಳೆ ಮುಗಿಬಿದ್ದು ಮುಖ್ಯಮಂತ್ರಿಗೆ ಮನವಿಪತ್ರಗಳನ್ನು ಸಲ್ಲಿಸಿದ್ದ ಸಾರ್ವಜನಿಕರು ಹಾಗು ರೈತಸಂಘಟನೆಗಳು ವಿವಿಧ ಬೇಡಿಕೆ ಈಡೇರಿಸುವಂತೆ, ಸಮಸ್ಯೆ ಪರಿಹರಿಸುವಂತೆ ಮುಖ್ಯಮಂತ್ರಿಗೆ ಖುದ್ದಾಗಿ ಮನವಿ ಸಲ್ಲಿಕೆ ಮನವಿಗಳನ್ನು ಸ್ವೀಕರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಆದರೆ ಮುಖ್ಯಮಂತ್ರಿ ಸ್ವೀಕರಿಸಿದ್ದ ಮನವಿ ಪತ್ರಗಳು ಇದೀಗ ಕಸದರಾಶಿಯಲ್ಲಿ ಪತ್ತೆ
ನಗರದ ಡಾ.ಬಿ.ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಕಸದ ರಾಶಿಯಲ್ಲಿ ಬಿದ್ದಿರುವ ಮನವಿಪತ್ರಗಳು
ಬಿಸಿಲನ್ನು ಲೆಕ್ಕಿಸದೆ ಗಂಟೆಗಟ್ಟಲೆ ಕಾದು ಮನವಿ ಸಲ್ಲಿಸಿದ್ದ ಸಾರ್ವಜನಿಕರು ಹಾಗು ರೈತ ಸಂಘಟನೆಗಳು
ಇದು ದುರಹಂಕಾರದ ಪರಮಾವಧಿ ಎಂದು ರೈತ ಸಂಘಟನೆಗಳ ಆಕ್ರೋಶ ತಮ್ಮ ಮನವಿಗಳನ್ನು ಸ್ವೀಕರಿಸಿದ್ದಾದರು ಯಾಕೆ
ಯಾಕಿಷ್ಟೊಂದು ನಿರ್ಲಕ್ಷ್ಯ? ಸ್ವತಃ ಮುಖ್ಯಮಂತ್ರಿಯನ್ನೇ ಭೇಟಿ ಮಾಡಿ ಸಲ್ಲಿಸಿದ್ದ ಮನವಿ ಪತ್ರಗಳಿಗೆ ಈ ಗತಿಯಾದರೆ
ಅಧಿಕಾರಿಗಳಿ ಸಲ್ಲಿಸುವ ಮನವಿ ಗಳ ಕಥೆ ಏನು? ಎಂದು ಆಕ್ರೋಶ ಮುಖ್ಯಮಂತ್ರಿ ಸಿದ್ದರಾಮಯ್ಯ ಜನರ ಕ್ಷಮೆ ಕೋರಬೇಕು
ಇಲ್ಲದಿದ್ದಲ್ಲಿ ಚಾಮರಾಜನಗರ ಜಿಲ್ಲೆಗೆ ಭೇಟಿ ಮಾಡಿದಾಗ ಕಪ್ಪು ಬಾವುಟ ಪ್ರದರ್ಶನ ಎಂದು ಎಚ್ಚರಿಕೆ