ಬೆಂಗಳೂರು: ಹುಲಿ ಉಗುರುಗೆ ಸಂಬಂಧಿಸಿದಂತೆ ಬಿಗ್ ಬಾಸ್ ಸ್ಪರ್ಧಿ ಹಳ್ಳಿಕಾರ್ ಸಂತೋಷ್ ಅವರನ್ನು ಅರಣ್ಯಾಧಿಕಾರಿಗಳು ಅರೆಸ್ಟ್ ಮಾಡಿದ ಬೆನ್ನಲ್ಲೇ ಇದೀಗ ಲಾಕೆಟ್, ಚರ್ಮ ಬಳಕೆ ಮಾಡಿದ ಆರೋಪದ ಮೇಲೆ ಎಲ್ಲರ ಫೋಟೋ ವೀಡಿಯೋಗಳು ಒಂದೊಂದಾಗಿಯೇ ಹೊರಗೆ ಬರುತ್ತಿವೆ.
ಅಂತೆಯೇ ಈಗಾಗಲೇ ನಟ ದರ್ಶನ್, ಜಗ್ಗೇಶ್, ರಾಕ್ ಲೈನ್ ಮತ್ತು ನಿಖಿಲ್ ಕುಮಾರಸ್ವಾಮಿ ಮನೆಯಲ್ಲಿ ಅರಣ್ಯಾಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ. ಇದರ ಬೆನ್ನಲ್ಲೆ ರುಂಡ ಸಮೇತ ಇರುವ ಹುಲಿ ಚರ್ಮದ ಮೇಲೆ ಕುಳಿತಿರುವ ವಿನಯ್ ಗುರೂಜಿ ಫೋಟೋ ವೈರಲ್ ಆಗಿದೆ.
ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸ್ಯಾಂಡಲ್ವುಡ್ ನಟರ ಮನೆಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಇದೇ ವೇಳೆ ವಿನಯ್ ಗುರೂಜಿ ತಲೆ ಸಮೇತ ಹುಲಿ ಚರ್ಮವನ್ನು ಹೊಂದಿದ್ದು, ತನಿಖೆ ಮಾಡುವಂತೆ ನೆಟ್ಟಿಗರು ಪಟ್ಟು ಹಿಡಿದಿದ್ದಾರೆ. ಆದ್ರೆ ಯಾವುದೇ ಕಾರಣಕ್ಕೂ ವಿನಯ್ ಗುರೂಜಿ ಬಂಧಿಸಲು ಸಾಧ್ಯವಿಲ್ಲ ಬಂಧಿಸಬಾರದು ಎಂದು ಅಭಿಮಾನಿ ಬಳಗ ಒತ್ತಾಯ ಮಾಡುತ್ತಿದೆ. ಯಾಕಂದರೆ ಅವರಿಗೆ ಅಭಿಮಾನಿಗಳಿ ಗಿಫ್ಟ್ ಕೊಟ್ಟಿದ್ದಾರೆ ಹೊರತು ಅವರೇನು ಖುದ್ದಾಗಿ ಹೋಗಿ ಹುಲಿಯನ್ನು ಹಿಡಿದು ಕೊಂದಿಲ್ಲವೆಂದು ಅವರ ಭಕ್ತರ ವಾದ.
ವಿನಯ್ ಗುರೂಜಿಯವರ ಬಳಿ ಇರುವ ಹುಲಿ ಚರ್ಮವನ್ನು ಶಿವಮೊಗ್ಗ ಮೂಲದ ಅಮರೇಂದ್ರ ಕಿರೀಟಿ ಎನ್ನುವರು ಕಳೆದ 2 ವರ್ಷದ ಹಿಂದೆ ಅವರಿಗೆ ಉಡುಗೂರೆಯಾಗಿ ನೀಡಿದ್ದರು. ಅಲ್ಲದೆ, ಈ ಕುರಿತು ಅರಣ್ಯಾಧಿಕಾರಿಗಳಿಂದ ಅನುಮತಿಯನ್ನೂ ಅವರು ಸಹ ಪಡೆದಿದ್ದರು. ಆದ್ರೆ 2022 ರಲ್ಲಿ ಈ ಹುಲಿ ಚರ್ಮವನ್ನು ಅರಣ್ಯ ಇಲಾಖೆಗೆ ಹಿಂದಿರುಗಿಸಲಾಗಿದೆ ಎನ್ನಲಾಗುತ್ತಿದೆ ಈ ಕಾರಣದಿಂದಾಗಿ ವಿನಯ್ ಗುರೂಜಿಯನ್ನು ಬಂಧಿಸಲು ಸಾಧ್ಯವಿಲ್ಲವೆಂದು ಹೇಳಲಾಗುತ್ತಿದೆ.
ಹಾಗೆ ಅಮರೇಂದ್ರ ಕಿರೀಟಿ ಅವರ ತಂದೆ ಕಾಲದಿಂದಲೂ ಹುಲಿ ಚರ್ಮ ಅವರ ಮನೆಯಲ್ಲಿದೆ. 1975 ರಲ್ಲಿ ಅರಣ್ಯ ಇಲಾಖೆಯಿಂದ ಚರ್ಮ ಬಳಕೆಗೆ ಅಮರೇಂದ್ರ ಕಿರೀಟಿ ಅನುಮತಿ ಪಡೆದಿದ್ದರಂತೆ. ಇದರ ಎಲ್ಲ ದಾಖಲೆ ಅವರ ಬಳಿ ಇದೆ. ಹೀಗಾಗಿ ವಿನಯ್ ಗುರೂಜಿಗೆ ಯಾವುದೇ ಬಂಧನ ಭೀತಿ ಇಲ್ಲ ಎಂಬುದಾಗಿ ಸದ್ಯದ ಮಾಹಿತಿ ಪ್ರಕಾರ ಸುದ್ದು ಬರುತ್ತಿದೆ. ಆದರೂ ಏನಾಗುತ್ತೆ ಎಂದು ಕಾದುನೋಡಬೇಕಿದೆ.