ಅಮೆರಿಕದ ನಟಿ ಕಿಮ್ ಕರ್ದಾಶಿಯಾನ್ ಸದಾ ತಮ್ಮ ಹಾಟ್ ಹಾಟ್ ಫೋಟೋಗಳ ಮೂಲಕವೇ ಸದ್ದು ಮಾಡುತ್ತಿರುತ್ತಾರೆ. ಆಕೆಯ ಒಂದೇ ಒಂದು ಫೋಟೋಗೆ ಲಕ್ಷಗಟ್ಟಲೇ ಲೈಕ್ ಗಳು ಬರುತ್ತವೆ. ಆದರೆ ಇದೀಗ ಆಕೆಯ ಫೋಟೋವೊಂದು ವಿವಾದಕ್ಕೆ ಕಾರಣವಾಗಿದೆ. ನಟಿಯ ನಡೆಗೆ ಸಾಕಷ್ಟು ಆಕ್ರೋಶ ವ್ಯಕ್ತವಾದ ಬಳಿಕ ಆಕೆ ಆ ಫೋಟೋವನ್ನು ಡಿಲೀಟ್ ಮಾಡಿದ್ದಾರೆ. ಅಷ್ಟಕ್ಕೂ ಇದೆಲ್ಲ ನಡೆದದ್ದು ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮಗನ ಮದುವೆಯಲ್ಲಿ.
ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿಯ ಮದುವೆಯಲ್ಲಿ ಅತಿಥಿಯಾಗಿ ಕಿಮ್ ಭಾಗವಹಿಸಿದ್ದಾರೆ. ಭಾರತದ ಸಾಂಪ್ರದಾಯಿಕ ಉಡುಗೆ ಧರಿಸಿದ್ದರೂ ಕೂಡ ತಮ್ಮ ಮಾದಕತೆಯನ್ನು ಅವರು ಬಿಟ್ಟುಕೊಟ್ಟಿಲ್ಲ. ಸಖತ್ ಹಾಟ್ ಆಗಿ ಕಾಣಿಸಿಕೊಂಡ ಅವರು ಗಣೇಶ ವಿಗ್ರಹದ ಮೇಲೆ ಒರಗಿಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ.
ಆಕ್ಷೇಪಾರ್ಹ ರೀತಿಯಲ್ಲಿ ಪೋಸ್ ನೀಡಿದ ಕಿಮ್ ಕರ್ದಾಶಿಯಾನ್ ಅವರು ಈ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡರು. ಆದರೆ ಅದನ್ನು ನೋಡಿದ ಅನೇಕರು ಗರಂ ಆದರು. ನಟಿ ಈ ರೀತಿ ಮಾಡಿದ್ದು ಸರಿಯಲ್ಲ ಎಂದು ಹಲವರು ಕಮೆಂಟ್ ಮಾಡಿದರು. ‘ನಿಮ್ಮ ಕಳಪೆ ಫೋಟೋಶೂಟ್ ಸಲುವಾಗಿ ಹಿಂದೂ ದೇವರನ್ನು ಬಳಸಿಕೊಳ್ಳಬೇಡಿ’ ಎಂದು ನಟಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಬಳಿಕ ಕಿಮ್ ಅವರಿಗೆ ತಮ್ಮ ತಪ್ಪಿನ ಅರಿವಾಗಿದೆ ಎನಿಸುತ್ತದೆ. ಹಾಗಾಗಿ, ಗಣೇಶ ವಿಗ್ರಹದ ಜೊತೆಗಿನ ಫೋಟೋವನ್ನು ಡಿಲೀಟ್ ಮಾಡಿದ್ದಾರೆ.