ಬೆಂಗಳೂರು ;- ಶಕ್ತಿ ಯೋಜನೆಯನ್ನು ರದ್ದು ಮಾಡುವಂತೆ ಆಟೋ ಚಾಲಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇಂದು ಬೆಂಗಳೂರಿನ ಸಿಎಂ ಗೃಹ ಕಚೇರಿಯಲ್ಲಿ ಆಟೋ ಚಾಲಕರ ಸಂಘದವರು ಭೇಟಿಯಾಗಿ ಈ ಮನವಿ ಮಾಡಿಕೊಂಡಿದ್ದಾರೆ.
ಶಕ್ತಿ ಯೋಜನೆಯಿಂದ ನಮಗೆ ನಷ್ಟವಾಗುತ್ತಿದ್ದು, ಜೀವನನಿರ್ವಹಣೆಯೇ ಕಷ್ಟವಾಗುತ್ತಿದೆ. ಶಕ್ತಿ ಯೋಜನೆ ಮುಂದುವರಿಸಿದರೆ ನಮ್ಮ ಜೀವನ ಬೀದಿಗೆ ಬರುತ್ತದೆ. ಹೀಗಾಗಿ ಶಕ್ತಿ ಯೋಜನೆ ರದ್ದು ಮಾಡಿ ಅಥವಾ ಆಟೋ ಚಾಲಕರಿಗೂ ಅರ್ಥಿಕ ಸಹಾಯ ನೀಡಿ ಎಂದು ಆಟೋ ಚಾಲಕರ ಸಂಘಟನೆಗಳು ಮನವಿ ಮಾಡಿಕೊಂಡಿವೆ.