ಬೆಂಗಳೂರು: ದಯವಿಟ್ಟು ಗುಂಡಿಯನ್ನು ಮುಚ್ಚಿ ರಸ್ತೆ ಸಮಸ್ಯೆ ಬಗೆಹರಿಸಿ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಅವರು ಬಿಬಿಎಂಪಿಗೆ (BBMP) ಮನವಿ ಮಾಡಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.
ಹೌದು. ವೀರಣ್ಣಪಾಳ್ಯದಿಂದ ಹೆಬ್ಬಾಳ ಕಡೆಗಿನ ರಿಂಗ್ ರೋಡಿನ ಸರ್ವಿಸ್ ರಸ್ತೆಯ ವಿಡಿಯೋವನ್ನು ಸಾರ್ವಜನಿಕರು ನನಗೆ ಕಳಿಸಿದ್ದಾರೆ.
ಬಿಬಿಎಂಪಿ ಅಥವಾ ಬಿಎಂಆರ್ಸಿಇಎಲ್ ಯಾರಾದ್ರೂ ಆಗಲಿ ದಯವಿಟ್ಟು ಗುಂಡಿಯನ್ನು ಮುಚ್ಚಿ ರಸ್ತೆ ದುರಸ್ಥಿ ಮಾಡಿ ಸಾರ್ವಜನಿಕರ ಸಮಸ್ಯೆಯನ್ನು ಪರಿಹರಿಸಿ ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಸ್ತೆ ಇರುವ ಜಾಗ ಕೃಷ್ಣ ಬೈರೇಗೌಡರ ಕ್ಷೇತ್ರಕ್ಕೆ ಬರುತ್ತಿದೆ. ಹೀಗಿದ್ದರೂ ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿದೆ.
ನರೇಂದ್ರ ಸಿಂಹ ಮೂರ್ತಿ ಎಂಬವರು, ಮಂತ್ರಿಗಳೇ ಇಷ್ಟು ಅಸಹಾಯಕರಾದರೆ ಹೇಗೆ? ಒಂದು ಫೋನ್ ಮಾಡಿದರೆ ಬಿಬಿಎಂಪಿ ಕಮಿಷನರ್ ನಿಮ್ಮ ಫೋನ್ ಸ್ವೀಕರಿಸುತ್ತಿದ್ದಾರೋ ಇಲ್ಲವೋ ಎಂದು ಪ್ರಶ್ನಿಸಿದ್ದಾರೆ.