ದೆಹಲಿ: ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಮುಂಬೈಗೆ ಭೇಟಿ ನೀಡಲಿದ್ದಾರೆ. ₹29,400 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ ,ಸಂಜೆ 5:30 ರ ಸುಮಾರಿಗೆ ಗೋರೆಗಾಂವ್ನಲ್ಲಿರುವ ನೆಸ್ಕೋ ಪ್ರದರ್ಶನ ಕೇಂದ್ರವನ್ನು ತಲುಪಲಿದ್ದಾರೆ ಎಂದು ತಿಳಿಸಿದೆ.
ರಸ್ತೆ, ರೈಲ್ವೇ ಮತ್ತು ಬಂದರು ಕ್ಷೇತ್ರಕ್ಕೆ ಸಂಬಂಧಿಸಿದ ಬಹು ಯೋಜನೆಗಳಿಗೆ ಪ್ರಧಾನಿ ಚಾಲನೆ ನೀಡಲಿದ್ದಾರೆ. ಇದಾದ ನಂತರ ಸಂಜೆ 7 ಗಂಟೆಗೆ, ಅವರು ಐಎನ್ಎಸ್ ಟವರ್ಗಳನ್ನು ಉದ್ಘಾಟಿಸಲು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನ ಜಿ-ಬ್ಲಾಕ್ನಲ್ಲಿರುವ ಇಂಡಿಯನ್ ನ್ಯೂಸ್ಪೇಪರ್ ಸೊಸೈಟಿ (ಐಎನ್ಎಸ್) ಸೆಕ್ರೆಟರಿಯೇಟ್ಗೆ ಭೇಟಿ ನೀಡಲಿದ್ದಾರೆ.
ಥಾಣೆ ಮತ್ತು ಬೊರಿವಲಿ ನಡುವಿನ ಈ ಟ್ವಿನ್ ಟ್ಯೂಬ್ ಸುರಂಗವು ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಕೆಳಗೆ ಹಾದುಹೋಗುತ್ತದೆ, ಇದು ಬೋರಿವಲಿ ಬದಿಯಲ್ಲಿ ವೆಸ್ಟರ್ನ್ ಎಕ್ಸ್ಪ್ರೆಸ್ ಹೆದ್ದಾರಿ ಮತ್ತು ಥಾಣೆ ಬದಿಯಲ್ಲಿರುವ ಥಾಣೆ ಘೋಡ್ಬಂದರ್ ರಸ್ತೆ ನಡುವೆ ನೇರ ಸಂಪರ್ಕ ಸಾಧ್ಯವಾಗಿಸುತ್ತದೆ. ಇದರ ಒಟ್ಟು ಉದ್ದ 11.8 ಕಿ.ಮೀ. ಇದು ಥಾಣೆಯಿಂದ ಬೊರಿವಲಿಗೆ 12 ಕಿಮೀ ಪ್ರಯಾಣವನ್ನು ಕಡಿಮೆ ಮಾಡುತ್ತದೆ ಮತ್ತು ಪ್ರಯಾಣದ ಸಮಯದಲ್ಲಿ ಸುಮಾರು 1 ಗಂಟೆ ಉಳಿತಾಯವಾಗುತ್ತದೆ.