ಜೈಪುರ: ಅಜ್ಮೀರ್-ದೆಹಲಿ ಕಂಟೋನ್ಮೆಂಟ್ ಮಾರ್ಗದಲ್ಲಿ ರಾಜಸ್ಥಾನದ (Rajasthan) ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ಗೆ (Vande Bharat Express) ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು (ಬುಧವಾರ) ವಿಡಿಯೊ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ. ಈ ಮಾರ್ಗದಲ್ಲಿ ಓಡುತ್ತಿರುವ ಪ್ರಸ್ತುತ ವೇಗದ ರೈಲಿಗಿಂತ ಒಂದು ಗಂಟೆ ಮುಂಚಿತವಾಗಿ ರೈಲು ಪ್ರಯಾಣವನ್ನು ಪೂರ್ಣಗೊಳಿಸುತ್ತದೆ ಎಂದು ತಿಳಿಸಿದ್ದಾರೆ. ಇಂದು ಪ್ರಧಾನಿ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ರೈಲಿಗೆ ಚಾಲನೆ ನೀಡಿದರ. ರೈಲುಗಳು ಜೈಪುರ, ಅಲ್ವಾರ್ ಮತ್ತು ಗುರುಗ್ರಾಮ್ನಲ್ಲಿ ನಿಲುಗಡೆಯೊಂದಿಗೆ ಅಜ್ಮೀರ್ ಮತ್ತು ದೆಹಲಿ ಕಂಟೋನ್ಮೆಂಟ್ ನಡುವೆ ಕಾರ್ಯನಿರ್ವಹಿಸುತ್ತವೆ. ರೈಲು ದೆಹಲಿ ಕಂಟೋನ್ಮೆಂಟ್ ಮತ್ತು ಅಜ್ಮೀರ್ ನಡುವಿನ ದೂರವನ್ನು 5 ಗಂಟೆ 15 ನಿಮಿಷಗಳಲ್ಲಿ ಕ್ರಮಿಸುತ್ತದೆ. ಶತಾಬ್ದಿ ಎಕ್ಸ್ಪ್ರೆಸ್, ಪ್ರಸ್ತುತ ಈ ಮಾರ್ಗದಲ್ಲಿ ಅತ್ಯಂತ ವೇಗದ ರೈಲು ಆಗಿದ್ದು, ಇದು ಇದೇ ದೂರವನ್ನು 6 ಗಂಟೆ 15 ನಿಮಿಷಗಳಲ್ಲಿ ಕ್ರಮಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಅಜ್ಮೀರ್-ದೆಹಲಿ ಕಂಟೋನ್ಮೆಂಟ್ ವಂದೇ ಭಾರತ್ ಎಕ್ಸ್ಪ್ರೆಸ್ ಎತ್ತರದ ಓವರ್ಹೆಡ್ ಎಲೆಕ್ಟ್ರಿಕ್ ಪ್ರದೇಶದಲ್ಲಿ ವಿಶ್ವದ ಮೊದಲ ಸೆಮಿ-ಹೈ ಸ್ಪೀಡ್ ಪ್ಯಾಸೆಂಜರ್ ರೈಲು ಆಗಿರುತ್ತದೆ.
ಈ ವಂದೇ ಭಾರತ್ ಎಕ್ಸ್ಪ್ರೆಸ್ನ ನಿಯಮಿತ ಸೇವೆಯು ಏಪ್ರಿಲ್ 13 ರಿಂದ ಪ್ರಾರಂಭವಾಗಲಿದೆ. ಇದು ಜೈಪುರ, ಅಲ್ವಾರ್ ಮತ್ತು ಗುರ್ಗಾಂವ್ನಲ್ಲಿ ನಿಲುಗಡೆಗಳೊಂದಿಗೆ ಅಜ್ಮೀರ್ ಮತ್ತು ದೆಹಲಿ ಕ್ಯಾಂಟ್ ನಡುವೆ ಕಾರ್ಯನಿರ್ವಹಿಸುತ್ತದೆ. ಈ ರೈಲು ರಾಜಸ್ಥಾನದ ಪ್ರಮುಖ ಪ್ರವಾಸಿ ತಾಣಗಳಾದ ಪುಷ್ಕರ್ ಮತ್ತು ಅಜ್ಮೀರ್ ದರ್ಗಾಗಳ ಸಂಪರ್ಕವನ್ನು ಸುಧಾರಿಸುತ್ತದೆ ಮತ್ತು ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ ಎಂದು ಅದು ಹೇಳಿದೆ.
ದೇಶದಲ್ಲಿ 9 ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು
ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಫೆಬ್ರವರಿ 18, 2019 ರಂದು ಉದ್ಘಾಟಿಸಲಾಯಿತು. ಜನವರಿ 12 ರವರೆಗೆ ದೇಶದಲ್ಲಿ ಒಟ್ಟು 7 ಸುಧಾರಿತ ಹೈಸ್ಪೀಡ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು ಕಾರ್ಯನಿರ್ವಹಿಸುತ್ತಿವೆ. ಸಿಕಂದರಾಬಾದ್ನಿಂದ ವಿಶಾಖಪಟ್ಟಣಂ ನಡುವಿನ 8 ನೇ ವಂದೇ ಭಾರತ್ ಎಕ್ಸ್ಪ್ರೆಸ್ ಅನ್ನು ಜನವರಿ 15 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಫ್ಲ್ಯಾಗ್ ಮಾಡಿದ್ದಾರೆ.
- ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು: ವಾರಣಾಸಿ – ನವದೆಹಲಿ (22435) ನವದೆಹಲಿ – ವಾರಣಾಸಿ (22436)
- ಎರಡನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು: ನವದೆಹಲಿ – ಎಸ್ಎಂವಿಡಿ ಕಟ್ರಾ (22439) / ಎಸ್ಎಂವಿಡಿ ಕತ್ರಾ – ನವದೆಹಲಿ (22440)
- ಮೂರನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು: ಮುಂಬೈ ಸೆಂಟ್ರಲ್- ಗಾಂಧಿನಗರ CAP (20901)/ ಗಾಂಧಿನಗರ CAP-ಮುಂಬೈ ಸೆಂಟ್ರಲ್ (20902)
4.ನಾಲ್ಕನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು: ನವದೆಹಲಿ – ಅಂಬ್ ಅಂಡೌರಾ (22447) / ಅಂಬ್ ಅಂಡೌರಾ – ನವದೆಹಲಿ (22448)
- ಐದನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು: ಚೆನ್ನೈ – ಮೈಸೂರು (20608)/ ಮೈಸೂರು- ಚೆನ್ನೈ (20607)
- ಆರನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು: ಬಿಲಾಸ್ಪುರ ಜಂಕ್ಷನ್ – ನಾಗ್ಪುರ ಜಂಕ್ಷನ್ (20825) / ನಾಗ್ಪುರ – ಬಿಲಾಸ್ಪುರ್ ಜಂಕ್ಷನ್ (20826)
- ಏಳನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು: ಹೌರಾ-ಹೊಸ ಜಲ್ಪೈಗುರಿ (22301) /ಹೊಸ ಜಲ್ಪೈಗುರಿ ಜಂಕ್ಷನ್ – ಹೌರಾ (22302)
- ಎಂಟನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು: ವಿಶಾಖಪಟ್ಟಣಂ-ಸಿಕಂದರಾಬಾದ್ (20833) / ಸಿಕಂದರಾಬಾದ್-ವಿಶಾಖಪಟ್ಟಣಂ ರೈಲು (20834)
- ಒಂಬತ್ತನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು: ಅಜ್ಮೀರ್-ದೆಹಲಿ ಕಂಟೋನ್ಮೆಂಟ್