ವಾರಾಣಸಿ :- ತಡರಾತ್ರಿ ವಾರಾಣಸಿಯ ರಸ್ತೆಯನ್ನು PM ನರೇಂದ್ರ ಮೋದಿ ಅವರು ಪರಿಶೀಲಿಸಿದ್ದಾರೆ. ರಾತ್ರಿ 11 ಗಂಟೆ ಸುಮಾರಿಗೆ ಶಿವಪುರ-ಫುಲ್ವಾರಿಯಾ-ಲಹರ್ತಾರಾ ಹೆದ್ದಾರಿಯನ್ನು ಪರಿಶೀಲಿಸಿದರು.
ಸುದೀರ್ಘ ಮತ್ತು ಬಿಡುವಿಲ್ಲದ ಗುಜರಾತ್ ಪ್ರವಾಸದ ನಂತರ ವಾರಾಣಸಿಗೆ ಆಗಮಿಸಿದ ಮೋದಿ, ಹೆದ್ದಾರಿಯನ್ನು ಪರಿಶೀಲಿಸಿದರು. ಇತ್ತೀಚೆಗಷ್ಟೇ ಇದು ಉದ್ಘಾಟನೆಗೊಂಡಿತ್ತು. ದಕ್ಷಿಣ ಭಾಗದ ಬಿಹೆಚ್ಯು, ಬಿಎಲ್ಡಬ್ಲ್ಯುವಿನಿಂದ ವಿಮಾನ ನಿಲ್ದಾಣ, ಲಕ್ನೋ, ಆಜಂಗಢ ಮತ್ತು ಘಾಜಿಪುರದ ಕಡೆಗೆ ಹೋಗಲು ಬಯಸುವ ಸುಮಾರು 5 ಲಕ್ಷ ಜನರಿಗೆ ಈ ಹೆದ್ದಾರಿಯಿಂದ ಪ್ರಯೋಜನವಾಗಲಿದೆ ಎನ್ನಲಾಗಿದೆ.
ಹೆದ್ದಾರಿಯನ್ನು 360 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಸಂಚಾರ ದಟ್ಟಣೆ ಕಡಿಮೆ ಮಾಡಲು ಸಹಕಾರಿಯಾಗಿದೆ.
ಹೆದ್ದಾರಿಯನ್ನು ಪರಿಶೀಲನೆ ನಡೆಸಿದ ಬಗ್ಗೆ ಪ್ರಧಾನಿ ಮೋದಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಹಾಗೂ ಫೋಟೊಗಳನ್ನು ಪ್ರಕಟಿಸಿದ್ದಾರೆ. ಇದೇ ವೇಳೆ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಮೋದಿ ಜತೆ ಇದ್ದರು.