ನವದೆಹಲಿ;- 73ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇದ್ದಾರೆ. ದೇಶಾದ್ಯಂತ ಬಿಜೆಪಿ ವಿಶೇಷ ಸೇವಾ ಪಾಕ್ಷಿಕ ಅಂದೋಲನ ನಡೆಸುತ್ತಿದೆ. ನರೇಂದ್ರ ಮೋದಿ ಆಪ್ನಲ್ಲಿ ಈ ಸೇವಾ ಪಾಕ್ಷಿಕ ಅಭಿಯಾನದ ಬಗ್ಗೆ ವಿವರಗಳಿವೆ. ಇದರಲ್ಲಿ ಭಾಗವಹಿಸುವ ಮೂಲಕ ಪ್ರಧಾನಿ ಅಭಿಮಾನಿಗಳು, ದೇಶದ ನಾಗರಿಕರು ಅವರ ಹುಟ್ಟುಹಬ್ಬಕ್ಕೆ ಕೊಡುಗೆ ನೀಡಬಹುದು.
ನರೇಂದ್ರ ಮೋದಿ ಆಪ್ ಅಥವಾ ಮೇರಾ ಸಂಸದ ಪೋರ್ಟಲ್ನಲ್ಲಿ ನಿಮ್ಮ ಇಮೇಲ್, ಮೊಬೈಲ್ ಐಡಿ ಹಾಕಿ ಲಾಗಿನ್ ಆಗಿ, ನಂತರ ಅಲ್ಲಿರುವ ಸೇವಾ ಪಾಕ್ಷಿಕದ ಬ್ಯಾನರ್ ಮೇಲೆ ಕ್ಲಿಕ್ ಮಾಡಿ, ಇಂದಿನಿಂದ ಸೆಪ್ಟೆಂಬರ್ ಅಕ್ಟೋಬರ್ 2 ರ ಗಾಂಧಿ ಜಯಂತಿಯವರೆಗೆ ಈ ಸೇವಾ ಪಾಕ್ಷಿಕದಲ್ಲಿ ಭಾಗಿಯಾಗಬಹುದು.
ಇದರಲ್ಲಿ ನೀವು ವಿವಿಧ ರೀತಿಯಲ್ಲಿ ಪ್ರಧಾನಿ ಮೋದಿಗೆ ಶುಭ ಹಾರೈಸಬಹುದಾಗಿದೆ. ಆನ್ಲೈನ್ ವಸ್ತುಪ್ರದರ್ಶನ ಕೈಗೊಳ್ಳಬಹುದು. ವೀಡಿಯೋ ಮೂಲಕ ಶುಭ ಹಾರೈಸಬಹುದು