ಪ್ರಧಾನ ಮಂತ್ರಿ ನರೇಂದ್ರ ಮೋದಿ ಉಕ್ರೇನ್ ಗೆ ಭೇಟಿ ನೀಡಲಿದ್ದಾರೆ. ಮೋದಿ ಸ್ವಾಗತಕ್ಕಾಗಿ ಉಕ್ರೇನ್ನಲ್ಲಿ ವಿಶೇಷ ರೈಲು ರೆಡಿಯಾಗಿದ್ದು ಆ ರೈಲಿನಲ್ಲಿಯೇ ಪ್ರಧಾನಿ ನರೇಂದ್ರ ಮೋದಿ 20 ಗಂಟೆಗಳ ಕಾಲ ಪ್ರಯಾಣ ಮಾಡಲಿದ್ದಾರೆ.
ಇದು ಕೇವಲ ಒಂದು ಪ್ರಯಾಣವಲ್ಲ, ಮೋದಿ ತಮ್ಮ ಬದುಕಿನಲ್ಲಿ ಈ ಹಿಂದೆ ವಿಶ್ವದ ಹಲವು ನಾಯಕರು ಕೈಗೊಂಡಂತಹ ವಿಶೇಷ ರೈಲು ಪ್ರಯಾಣ ಮಾಡಲಿದ್ದಾರೆ. ಅತ್ಯಂತ ಐಷಾರಾಮಿ ಹಾಗೂ ಹೈ ಸೆಕ್ಯೂರಿಟಿ ಗುಣಗಳನ್ನು ಹೊಂದಿರುವ ಈ ರೈಲಿನಲ್ಲಿ ಈ ಹಿಂದೆ ಅಮೆರಿಕಾದ ಅಧ್ಯಕ್ಷ ಜೋ ಬೈಡನ್, ಫ್ರೆಂಚ್ ಅಧ್ಯಕ್ಷ ಇಮಾನ್ಯುಯಲ್ ಮ್ಯಾಕ್ರೆಲ್, ಜರ್ಮನ್ನ ಚಾನ್ಸಲರ್ ಒಲಾಫ್ ಸ್ಕೋಲ್ಜ್ನಂತ ಗಣ್ಯರು ಪ್ರಯಾಣ ಮಾಡಿದ್ದಾರೆ. ಈ ಟ್ರೇನ್ನ್ನು ವಿಶೇಷವಾಗಿ ಡಿಸೈನ್ ಮಾಡಿ ರೆಡಿ ಮಾಡಲಾಗಿದೆ. ಎಂತಹುದೇ ದಾಳಿಯನ್ನು ಸರಳವಾಗಿ ತಡೆಗಟ್ಟುವ ಹೈ ಸೆಕ್ಯೂರಿಟಿಯನ್ನೊಳಗೊಂಡ ಈ ಟ್ರೇನ್ ಇದಾಗಿದೆ.
ಕಟ್ಟಿಗೆಯಿಂದ ನಿರ್ಮಾಣವಾದ ಕ್ಯಾಬಿನ್ನಲ್ಲಿ ಅಗತ್ಯವಾದ ಐಷಾರಾಮಿ ವಿಶ್ರಾಂತಿ ಕೋಣೆಯಿದ್ದು, ಮೀಟಿಂಗ್ಗಳನ್ನು ನಡೆಸಲು ಬಹುದೊಡ್ಡದಾದ ಟೇಬಲ್ ವ್ಯವಸ್ಥೆಯನ್ನು ಅಲ್ಲಿ ಮಾಡಲಾಗಿದೆ. ದೊಡ್ಡದಾದ ಟಿವಿ, ಐಷಾರಾಮಿ ಸೋಫಾಗಳು ಸೇರಿದಂತೆ ಹಲವು ವಿಶೇಷತೆಗಳನ್ನು ಈ ರೈಲು ಒಳಗೊಂಡಿದೆ.
ಇದೇ ರೈಲಿನಲ್ಲಿ ಪ್ರಧಾನಿ ನರೇಂದ್ರ ಮೋದಿ, ಸುಮಾರು 20 ಗಂಟೆಗಳ ಕಾಲ ಪ್ರಯಾಣ ಮಾಡಲಿದ್ದಾರೆ. ಯುದ್ಧದಿಂದಾಗಿ ಉಕ್ರೇನ್ನ ಏರ್ಪೋರ್ಟ್ಗಳು ಹಾಗೂ ರಸ್ತೆ ಮಾರ್ಗ ಅಷ್ಟು ಸುರಕ್ಷಿತವಾಗಿಲ್ಲ ಹೀಗಾಗಿ ನರೇಂದ್ರ ಮೋದಿ ಉಕ್ರೇನ್ ರಾಜಧಾನಿ ಕ್ಯಿವ್ನಿಂದ ಯುದ್ಧ ನಡೆದ ಸ್ಥಳಕ್ಕೆ ರೈಲಿನಲ್ಲಿಯೇ ಸಂಚರಿಸಲಿದ್ದಾರೆ. ಇಲ್ಲಿಗೆ ಹೋಗಿ ಬರಲು 20 ಗಂಟೆ ಸಮಯ ಬೇಕಾಗಿದ್ದು ಈ ವೇಳೆ ಮೋದಿ ಹಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.