ನವದೆಹಲಿ: ನವದೆಹಲಿಯಲ್ಲಿ (New Delhi) ನಿರ್ಮಾಣವಾಗುತ್ತಿರುವ ಹೊಸ ಸಂಸತ್ ಭವನಕ್ಕೆ (New Parliament Building) ದಿಢೀರ್ ಭೇಟಿ ನೀಡಿ ಕಾಮಗಾರಿಯನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಪರಿಶೀಲಿಸಿದರು.
ಒಂದು ಗಂಟೆಗೂ ಅಧಿಕ ಕಾಲ ಕಾಮಗಾರಿ ಪರಿಶೀಲನೆ ನಡೆಸಿದರು. ಹೊಸ ಲೋಕಸಭೆ ಮತ್ತು ರಾಜ್ಯಸಭೆ ಸದನದ ಒಳಾಂಗಣಕ್ಕೆ ತೆರಳಿ ವೀಕ್ಷಣೆ ನಡೆಸಿದರು ನಂತರ ಸೆಂಟ್ರಲ್ ವಿಸ್ಟಾ ಯೋಜನೆ ಭಾಗವಾಗಿ ಹೊಸ ಸಂಸತ್ ಭವನವನ್ನು ನಿರ್ಮಿಸಲಾಗುತ್ತಿದೆ. ತ್ರಿಕೋನಾಕಾರದ ಸಂಸತ್ ಭವನ ಇದಾಗಿದ್ದು. ಕಟ್ಟಡ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ಕಟ್ಟಡದ ಒಳಾಂಗಣ ವಿನ್ಯಾಸದ ಕೆಲಸಗಳು ನಡೆಯುತ್ತಿವೆ. 2020ರಲ್ಲಿ ಟಾಟಾ ಪ್ರಾಜೆಕ್ಟ್ಸ್ಗೆ ನೂತನ ಸಂಸತ್ ಭವನ ನಿರ್ಮಾಣದ ಹೊಣೆ ವಹಿಸಲಾಗಿತ್ತು. ಆ ಸಂದರ್ಭದಲ್ಲಿ 971 ಕೋಟಿ ವೆಚ್ಚಕ್ಕೆ ಅನುಮೋದನೆ ದೊರಕಿತ್ತು. ನಂತರ ಅದರ ಕಚ್ಚಾ ಸಾಮಾಗ್ರಿ ದರ ಹೆಚ್ಚಳದಿಂದಾಗಿ ಯೋಜನಾ ವೆಚ್ಚ ಅಂದಾಜು 1,200 ಕೋಟಿಗೆ ಏರಿಸಲಾಗಿತ್ತು.
ನೂತನ ಸಂಸತ್ ಭವನದಲ್ಲಿ ಹಲವು ಆಕರ್ಷಣೆಗಳಿವೆ. ಅದರಂತೆ ಭವನದ ಮೇಲೆ ರಾಷ್ಟ್ರೀಯ ಲಾಂಛನವನ್ನು ಇರಿಸಲಾಗಿದೆ. ಈ ಲಾಂಛನದ ಪ್ರತಿಮೆಯನ್ನು ಕಂಚಿನಿಂದ ಮಾಡಲಾಗಿದ್ದು. ಅದರ ತೂಕ ಸುಮಾರು 9,500 ಕೆ.ಜಿ ಇದ್ದು, 6.5 ಮೀಟರ್ ಎತ್ತರವಿದೆ ಸಂಸತ್ ಭವನ ನಿರ್ಮಾಣ ಕಾರ್ಯ ಮಾಡುತ್ತಿರುವ ಕಾರ್ಮಿಕರ ಕುಶಲೋಪರಿಯನ್ನು ಪ್ರಧಾನಿ ಮೋದಿ ಅವರು ವಿಚಾರಿಸಿದರು.