ಬೆಂಗಳೂರು : ಚೀನಾದಲ್ಲಿ ಕೊರೊನಾ ನಂತರ ಇದೀಗ ಮೈಕೋಪ್ಲಾಸ್ಮಾ ನ್ಯುಮೋನಿಯಾ ಹಾಗೂ ಇನ್ನುಯೆಂಝಾ ವೈರಸ್ ತೀವ್ರವಾಗಿ ಹರಡಿದ್ದು, ಈ ಬೆನ್ನಲ್ಲೇ ಸಿಲಿಕಾನ್ ಸಿಟಿಯಲ್ಲೂ ಆತಂಕ ಹೆಚ್ಚಾಗಿದ್ದು, ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ರಿಲೀಸ್ ಮಾಡಿದೆ.
ಹೆಚ್ಚಾಗಿ ಮಕ್ಕಳನ್ನ ಟಾರ್ಗೆಟ್ ಮಾಡೋ ಈ ಮಹಾಮಾರಿ ವೈರಸ್ನಿಂದ ಇದೀಗ ರಾಜ್ಯದಲ್ಲೂ ಭೀತಿ ಹೆಚ್ಚಾಗಿದೆ. ಅದ್ರಲ್ಲೂ ಸಿಲಿಕಾನ್ ಸಿಟಿಯಲ್ಲಿ ಇನ್ಫ್ಲೂಯೆಂಜಾ ಮಾದರಿ ಅನಾರೋಗ್ಯ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗ್ತಿವೆ. ಹೀಗಾಗಿ ಈ ಬಗ್ಗೆ ಸಭೆ ನಡೆಸಿ ಗೈಡ್ ಲೈನ್ಸ್ ಬಿಡುಗಡೆ ಮಾಡಿದೆ.
ಮಾರ್ಗಸೂಚಿಯಲ್ಲೇನಿದೆ?
- ಕೆಮ್ಮುವಾಗ, ಸೀನುವಾಗ, ಬಾಯಿ, ಮೂಗು ಕರವಸ್ತ್ರದಿಂದ ಮುಚ್ಚಿ
- ಸಾಬೂನು & ನೀರಿನಿಂದ ಕೈಗಳನ್ನ ಆಗಾಗ ತೊಳೆದುಕೊಳ್ಳುವುದು
- ಕಣ್ಣು, ಮೂಗು, ಬಾಯಿಯನ್ನ ಅನಗತ್ಯವಾಗಿ ಸ್ಪರ್ಶಿಸುವುದು ಬೇಡ
- ಜನ ಸಂದಣಿ ಪ್ರದೇಶಗಳಿಗೆ ಭೇಟಿ ತಪ್ಪಿಸಿ, ಫೇಸ್ ಮಾಸ್ಕ್ ಬಳಸಿ
- ಫ್ಲೂ ಪೀಡಿತ ವ್ಯಕ್ತಿಗಳಿಂದ ಕನಿಷ್ಠ ಅಂತರ ಕಡ್ಡಾಯವಾಗಿ ಕಾಪಾಡಿ
- ಸಾಕಷ್ಟು ನೀರು ಕುಡಿಯುವುದು, ಪೌಷ್ಠಿಕ ಆಹಾರ ಸೇವಿಸುವುದು
- ಸಾರ್ವಜನಿಕವಾಗಿ ಎಲ್ಲೆಂದರಲ್ಲಿ ಉಗುಳುವುದು ಮಾಡಬಾರದು
- ರೋಗ ಲಕ್ಷಣ ಕಂಡ್ರೆ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ವರದಿ
- ವೈದ್ಯರನ್ನ ಸಂಪರ್ಕಿಸದೆ ಸ್ವಯಂ ಔಷಧಿಗಳನ್ನ ತೆಗೆದುಕೊಳ್ಳಬೇಡಿ