ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಮೇಸೆಜ್ ಮಾಡಿದ್ದಾರೆ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬುವವರನ್ನು ದರ್ಶನ್ ಎಂಡ್ ಗ್ಯಾಂಗ್ ಹತ್ಯೆ ಮಾಡಿದೆ. ಸದ್ಯ ದರ್ಶನ್, ಪವಿತ್ರಾ ಗೌಡ ಸೇರಿದಂತೆ 13 ಮಂದಿಯನ್ನು 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದರ್ಶನ್ ಹಾಗೂ ಅವರ ಸಹಚರರು ಇದ್ದಾರೆ. ಈ ವೇಳೆ ಠಾಣೆಗೆ ಹೊರಗಡೆಯಿಂದ 10ಕ್ಕೂ ಹೆಚ್ಚು ದೊನ್ನೆ ಬಿರಿಯಾನಿ ಬಾಕ್ಸ್ಗಳು ಬಂದಿವೆ. ಪೊಲೀಸರು ದರ್ಶನ್ ಎಂಡ್ ಗ್ಯಾಂಗ್ ಗೆ ದೊನ್ನೆ ಬಿರಿಯಾನಿ ತರಿಸಿಕೊಟ್ಟಿದ್ದಾರೆ ಎನ್ನಲಾಗುತ್ತಿದೆ.
ಕ್ಷುಲ್ಲಕ ಕಾರಣಕ್ಕಾಗಿ ರೇಣುಕಾ ಸ್ವಾಮಿ ಎಂಬುವವರನ್ನು ಹತ್ಯೆ ಮಾಡಿದ ಆರೋಪದಲ್ಲಿ ದರ್ಶನ್, ಪವಿತ್ರಾ ಗೌಡ, ವಿ. ವಿನಯ್, ಆರ್. ನಾಗರಾಜು, ಎಸ್. ಪ್ರದೋಶ್, ಎಂ. ಲಕ್ಷ್ಮಣ್, ಕೆ. ಪವನ್, ನಂದೀಶ್, ದೀಪಕ್ ಕುಮಾರ್, ಕಾರ್ತಿಕ್, ನಿಖಿಲ್ ನಾಯಕ್, ರಾಘವೇಂದ್ರ ಅಲಿಯಾಸ್ ರಾಘು, ಕೇಶವಮೂರ್ತಿ ಎಂಬುವವರನ್ನು ಪೊಲೀಸರು ಅರೆಸ್ಟ್ ಮಾಡಿದ್ದು ವಿಚಾರಣೆ ನಡೆಸುತ್ತಿದ್ದಾರೆ.
ರೇಣುಕಾ ಸ್ವಾಮಿ ಹತ್ಯೆಯಿಂದ ಅವರ ಕುಟುಂಬ ಕಂಗಲಾಗಿದೆ. ಇಡೀ ಮನೆ ರೇಣುಕಾಸ್ವಾಮಿ ಅವರನ್ನೇ ಅವಲಂಭಿಸಿತ್ತು. ಅಲ್ಲದೆ ವರ್ಷದ ಹಿಂದೆ ಮದುವೆಯಾಗಿದ್ದ ರೇಣುಕಾಸ್ವಾಮಿ ಪತ್ನಿ ಸಹನಾ ಈಗ 3 ತಿಂಗಳ ಗರ್ಭಿಣಿ ಆಗಿದ್ದು, ಪತಿಯ ಸಾವಿನ ಸುದ್ದಿ ತಿಳಿದು ಕಂಗಾಲಾಗಿದ್ದಾರೆ. ‘ನಮ್ಮ ಮನೆಯವರ ಸಾವಿಗೆ ನ್ಯಾಯ ಕೊಡಿಸಿ. ನಾನು ಮದುವೆ ಆಗಿ 1 ವರ್ಷ ಆಗಿದೆ. ನಾನು ಈಗ ಪ್ರೆಗ್ನೆಂಟ್. ನನ್ನ ಗಂಡನಿಗೆ ಹೀಗೆ ಆಗಬಾರದಿತ್ತು. ಮಧ್ಯಾಹ್ನ ಫೋನ್ ಮಾಡಿದ್ರು. ಆದರೆ ಬೆಂಗಳೂರಿಗೆ ಹೋಗುವ ಕುರಿತು ಏನನ್ನೂ ಹೇಳಿರಲಿಲ್ಲ. ದರ್ಶನ್ ಆದರೂ ಆಗಲಿ, ಯಾರಾದ್ರೂ ಆಗಲಿ ನಮಗೆ ನ್ಯಾಯ ಬೇಕು. ದರ್ಶನ್ ಸ್ಟಾರ್ ಆಗಿರಬಹುದು. ನಮ್ಮ ಬಳಿ ಜನ ಇದ್ದಾರೆ. ನಾನು ಗರ್ಭಿಣಿ. ಮುಂದಿನ ಜೀವನ ಹೇಗೆ? ನನ್ನ ಗಂಡನ ಜೀವಕ್ಕೆ ಹಾನಿ ಆಗಬಾರದಿತ್ತು. ಎಚ್ಚರಿಕೆ ನೀಡಿ ಬಿಟ್ಟಿದ್ದರೆ ಸಾಕಿತ್ತು’ ಎಂದು ಸಹನಾ ಕಣ್ಣೀರಿಟ್ಟಿದ್ದಾರೆ.