ಬೆಂಗಳೂರು: ರೀಲ್ಸ್ ಹುಚ್ಚು ಯಾರಿಗಿಲ್ಲ ಹೇಳಿ. ರೀಲ್ಸ್ ಗಳಿಂದಲೇ ಹಣ ಸಂಪಾದನೆ ಮಾಡೋರು ತುಂಬಾ ಜನ ಇದ್ದಾರೆ. ಎಂಟರ್ಟೈನ್ಮೆಂಟ್ ಪರ್ಪಸ್ ಗಾಗಿ ಹುಟ್ಟಿದ ರೀಲ್ಸ್ ಚಟ ಈಗ ಶಿಸ್ತಿನ ಇಲಾಖೆ ಪೊಲೀಸ್ ಡಿಪಾರ್ಟ್ಮೆಂಟ್ ಗೂ ಹಬ್ಬಿದೆ. ಇದಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ನಿರ್ಧರಿಸಿದೆ …
ಮೊನ್ನೆ ಮೊನ್ನೆಯಷ್ಟೆ ರೌಡಿಗಳ ರೀಲ್ಸ್ ಮಾಡಿದವರಿಗೆ ಪೊಲೀಸರು ಚಾಟಿ ಬೀಸಿದ್ದಾರೆ. ಅಪ್ರಾಪ್ತರಿಗೆ ವಾರ್ನಿಂಗ್ ಕೂಡ ಕೊಡಲಾಗಿದೆ. ಆದರೆ ಪೊಲೀಸರೇ ರೀಲ್ಸ್ ಗಳನ್ನ ಮಾಡುತ್ತಾ ಕೂತರೆ ರೌಡಿಗಳಿಗೆ ಏನು ಬುದ್ದಿ ಹೇಳ್ತಾರೆ ಎಂಬ ಪ್ರಶ್ನೆ ಕೂಡ ಮೂಡಿತ್ತು. ಇದೇ ಸಲುವಾಗಿ ಪೊಲೀಸ್ ಆಯುಕ್ತರು ಅದೊಂದು ನಿರ್ಧಾರ ತೆಗೆದುಕೊಂಡಿದ್ದಾರೆ.
ಬಾಲಿವುಡ್ ನ ಸಿಂಗಂ ಚಿತ್ರ ಬಂದ ಬಳಿಕ ಅದೇ ಮ್ಯೂಸಿಕ್ ಹಾಕಿಕೊಂಡು ರೀಲ್ಸ್ ಮಾಡುವ ಪೊಲೀಸರ ಸಂಖ್ಯೆ ಹೆಚ್ಚಾಗಿದೆ. ಈ ಹಿಂದೆಯಿಂದಲೂ ಇದೇ ರೀತಿ ರೀಲ್ಸ್ ಗಳನ್ನ ಮಾಡುತ್ತಾ ಕಾಲ ಕಳೆಯುವ ಪ್ರವೃತ್ತಿ ಪೊಲೀಸ್ ಇಲಾಖೆಯ ಕೆಲವರಿಗಿತ್ತು. ಈ ಹಿಂದೆ ಅಲ್ಲೊಬ್ಬ ಇಲ್ಲೊಬ್ಬ ರೀಲ್ಸ್ ಗಳ ಮಾಡಿ ಶೋ ಕೊಡ್ತಿದ್ರು. ಆದ್ರೆ ಯಾವಗ ಅದು ಹೆಚ್ಚಾತ್ತೋ ಪೊಲೀಸ್ ಇಲಾಖೆಯೂ ಎಚ್ಚೆತ್ತುಕೊಳ್ತು..
ಶಿಸ್ತಿನ ಇಲಾಖೆ ಪೊಲೀಸ್ ಇಲಾಖೆಯಲ್ಲಿ ಸಮವಸ್ತ್ರ ಧರಿಸಿ ಶೋ ಕೊಡುವುದು ಸಮಾಜದ ಮಟ್ಟಿಗೆ ಬ್ಯಾಡ್ ಇಂಪ್ರೆಷನ್ ಮೂಡುತ್ತೆ. ನಗರದಲ್ಲಿ ಕ್ರೈಂಗಳು ಹೆಚ್ಚಾಗ್ತಿದೆ. ಮಾಡಲು ತುಂಬಾ ಕೆಲಸಗಳಿವೆ ಅದನ್ನ ಬಿಟ್ಟು ರೀಲ್ಸ್ ಮಾಡುತ್ತಾ ಕುಳಿತರೆ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗೋದಂತೂ ಸತ್ಯ . ಈ ಹಿನ್ನಲೆ ವೈಯುಕ್ತಿಕ ವಿಚಾರವನ್ನ ಸಮವಸ್ತ್ರ ಧರಿಸಿ ಅದನ್ನ ವಿಡಿಯೋ ಮಾಡುವುದು ಅದಕ್ಕಡ ಇತರ ಚಿತ್ರಗಳ ಹಾಡನ್ನ ಬಳಸಿ ತನ್ನನ್ನ ತಾನು ಗ್ರೇಟ್ ಎಂದು ಪೋಟ್ರೇಟ್ ಮಾಡಿಕೊಳ್ಳುವುದು ಇನ್ನು ಮುಂದೆ ನಿಷೇಧಿಸಲಾಗಿದೆ.
ಕರ್ನಾಟಕ ರಾಜ್ಯ ನಾಗರೀಕ ಸೇವಾ ನಿಯಮದ ಪ್ರಕಾರ ಸರ್ಕಾರಿ ನೌಕರ ಅಧಿಕೃತವಾದ ಯಾವುದೇ ದಾಖಲೆಗಳನ್ನ ಸಾಮಾಜಿಕವಾಗಿ ಹಂಚಿಕೊಳ್ಳುವಂತಿಲ್ಲ .ಅದಕ್ಕೆಂದೆ ಸಕ್ಷಮ ಪ್ರಾಧಿಕಾರದಲ್ಲಿ ಮಾನ್ಯತೆ ಪಡೆದ ಅಧಿಕೃತ ಅಧಿಕಾರಿ ಮಾತ್ರ ಮಾಹಿತಿ ಹಂಚಿಕೊಳ್ಳಲು ಅವಕಾಶವಿದೆ. ಆದರೆ ಇಲ್ಲಿ ರೀಲ್ಸ್ ಮಾಡುವ ಮೂಲಕ ತಮ್ಮ ಫ್ಯಾನ್ ಬೇಸ್ ಗಳನ್ನೂ ಕೂಡ ಕೆಲವರು ಪಡೆದುಕೊಂಡಿದ್ದಾರೆ. ಪೊಲೀಅ ಅಧಿಕಾರಿಗಳು ಎಂಬ ಕಾರಣಕ್ಕೆ ಅವರಿಗೆ ಕಮೆಂಟ್ ಮಾಡುವ ಮೂಲಕ ಗೊಡ್ಡು ಸಲಾಂ ಹೊಡೆಯುವವರ ಸಂಖ್ಯೆ ಕೂಡ ಏನು ಕಮ್ಮಿಇಲ್ಲ . ಹೀಗಾಗಿ ಇವೆಲ್ಲಾದಕ್ಕ್ಕೂ ಪೊಲೀಸ್ ಇಲಾಖೆ ಕಡಿವಾಣ ಹಾಕಿದೆ
ಸದ್ಯ ರೀಲ್ಸ್ ಗಳನ್ನ ಮಾಡುವುದರ ಬದಲಿಗೆ ಕೆಲಸ ಮಾಡಿದರೆ ಜನರೇ ಅವರನ್ನ ಸಿಂಗಂ ಮಾಡ್ತಾರೆ ಎಂದು ಹಲವರ ಅಭಿಪ್ರಾಯ . ಸದ್ಯ ಈ ನಿಯಮಗಳನ್ನ ತಂದಿರುವ ಹಿನ್ನಲೆ ಕೆಲವರಿಗೆ ಬೇಸರವೂ ಆಗಿರಬಹುದು