ಬೆಂಗಳೂರು: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ನಿನ್ನೆ ಸುದ್ದಿಗೋಷ್ಠಿಯಲ್ಲಿ ಬಳಸಿದ ಪದಗಳ ಬಗ್ಗೆ ದೂರಿನಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬೆಳಗಾವಿ ರಾಜಕಾರಣ ಹಾಗೂ ಡಿಕೆಶಿ ವಿರುದ್ಧ ಏಕ ವಚನದಲ್ಲೇ ಕಿಡಿಕಾರಿದ ರಮೇಶ್ ಜಾರಕಿಹೊಳಿ, ಆತ ಏನು ಎನ್ನುವುದು ನನಗೆ ಚೆನ್ನಾಗೇ ಗೊತ್ತು. ನೇರಾನೇರ ರಾಜಕಾರಣ ಅವನಿಗೆ ಗೊತ್ತಿಲ್ಲ, ಪುಕ್ಕಲ. ಹಿಂಬಾಗಿಲ ರಾಜಕಾರಣ ಮಾಡುತ್ತಾನೆ’ ಎಂದು ವಾಗ್ದಾಳಿ ನಡೆಸಿದ್ರು..
ಇನ್ನು ರಮೇಶ್ ಜಾರಕಿಹೊಳಿ ಆರೋಕ್ಕ ಡಿಸಿಎಂ ಡಿಕೆ ಶಿವಕುಮಾರ್ ಸೈಲೆಂಟ್ ಆಗಿಯೇ ಟಕ್ಕರ್ ಆಗಿಯೇ ಟಕ್ಕರ್ ಕೊಟ್ಟಿದ್ದಾರೆ. ಜನ ಏನು ತೀರ್ಪು ಕೊಡಬೇಕು ಕೊಟ್ಟಿದ್ದಾರೆ. ನಮಗೆ ಮಾಡೋಕೆ ಕೆಲಸ ಇದೆ. ಮಾಡೋ ಕೆಲಸ ನಾವು ಮಾಡ್ತಿದ್ದೀವಿ ಎಂದು ತಿರುಗೇಟು ನೀಡಿದ್ದಾರೆ..