ಬೆಂಗಳೂರು:- ಚುನಾವಣಾ ಪ್ರಚಾರದ ವೇಳೆ ಡಿ ಗ್ಯಾಂಗ್ ಸದಸ್ಯರು ಪೊಲೀಸ್ ಪೇದೆ ಮೇಲೆ ದರ್ಪ ಮೆರೆದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಇತ್ತಿಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ನಟ ದರ್ಶನ್ ಪ್ರಚಾರ ಮಾಡಿದ್ದರು.
ಅದರಂತೆ ಏಪ್ರಿಲ್ 22 ರಂದು ಮದ್ದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೂಡ ಪ್ರಚಾರ ಮಾಡುತ್ತಿದ್ದ ವೇಳೆ ಕೆಲ ಕಾಂಗ್ರೆಸ್ ಕಾರ್ಯಕರ್ತರನ್ನ ದರ್ಶನ್ ಹತ್ತಿರ ಕಳುಹಿಸಿದ್ದಾನೆ ಎಂದು ಶಾಸಕ ಉದಯ್ ಗನ್ ಮ್ಯಾನ್ ಆಗಿದ್ದ ನಾಗೇಶ್ ಹಾಗೂ ನಟ ದರ್ಶನ್ನ ಶಿಷ್ಯರಾದ ಲಕ್ಷಣ ಹಾಗೂ ಮಣಿ ಎಂಬಾತನ ನಡುವೆ ಮಾತಿನ ಚಕಮಕಿ ನಡೆದಿತ್ತು.
ಆದಾದ ಬಳಿಕ ರಾತ್ರಿ 11.30ರ ಸುಮಾರಿಗೆ ಮದ್ದೂರು ತಾಲೂಕಿನ ಕದಲೂರು ಗ್ರಾಮದ ಶಾಸಕ ಉದಯ್ ಮನೆ ಬಳಿ ಮಣಿ ಹಾಗೂ ಲಕ್ಷಣ್ ಎಂಬುವವರು, ಗನ್ ಮ್ಯಾನ್ ನಾಗೇಶ್ ಎಂಬಾತನನ್ನ ಮನೆಯಿಂದ ಕರೆದುಕೊಂಡು ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. ಇದರಿಂದಾಗಿ ಗನ್ ಮ್ಯಾನ್ ನಾಗೇಶ್ ಮದ್ದೂರಿನ ಗುರುಶಾಂತಪ್ಪ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ, ಎಂಎಲ್ಸಿ ಕೂಡ ಮಾಡಿಸಿದ್ದ.
ಇನ್ನು ಆ ನಂತರ ಕೆಸ್ತೂರು ಠಾಣೆಗೆ ದೂರು ನೀಡಲು ಸಹ ಗನ್ ಮ್ಯಾನ್ ನಾಗೇಶ್ ಮುಂದಾಗಿದ್ದರು. ಆದರೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಶಾಸಕ ಉದಯ್ ರಾಜಿ ಮಾಡಿ, ಪ್ರಕರಣ ದಾಖಲಾಗದಂತೆ ನೋಡಿಕೊಂಡಿದ್ದರು. ಹೀಗಾಗಿ ಗನ್ ಮ್ಯಾನ್ ನಾಗೇಶ್ ದೂರು ಸಹ ನೀಡಿರಲಿಲ್ಲ. ಆನಂತರ ಡಿಎಆರ್ ಪೇದೆ ನಾಗೇಶ್ ನನ್ನ ಗನ್ ಮ್ಯಾನ್ನಿಂದ ತೆಗೆದಿದ್ದರು. ಹೀಗಾಗಿ ಮೂಲ ಸ್ಥಾನ ಡಿಎಆರ್ಗೆ ನಾಗೇಶ್ ಬಂದಿದ್ದ. ಆದರೆ ಇದೀಗ ಡಿ ಗ್ಯಾಂಗ್ನ ಕೌರ್ಯ ಬೆಳಕಿಗೆ ಬಂದಿದೆ.