ಲೋಕಸಭಾ ಚುನಾವಣೆಯ ಮತ ಎಣಿಕೆ ಹಿನ್ನೆಲೆ ಬೆಂಗಳೂರು ಪೊಲೀಸರಿಂದ ಬಿಗಿ ಭದ್ರತೆ ನಿಯೋಜನೆ ಮಾಡಿಕೊಂಡಿದ್ದಾರೆ. ನಗರದ ಮೂರು ಮತ ಎಣಿಕೆ ಕೇಂದ್ರಗಳಲ್ಲಿ ಹೆಚ್ಚಿನ ಭದ್ರತೆ ನಿಯೋಜನೆ ಮಾಡಲಾಗಿದೆ
ಮತ ಎಣಿಕೆ ಕೇಂದ್ರಗಳಲ್ಲಿ ಒಟ್ಟು 1524 ಅಧಿಕಾರಿ ಮತ್ತು ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದ್ದು,13 ಸಶಸ್ತ್ರ ತುಕಡಿಗಳು ಹಾಗೂ 4 ಕ್ಯೂಆರ್ ಟಿ ತಂಡಗಳ ನಿಯೋಜನೆ ಮಾಡಲಾಗಿದೆ.
ಈಗಾಗಲೇ 516 ಪೊಲೀಸ್ ಸಿಬ್ಬಂದಿಗಳು ಯೋಜನೆ ಮಾಡಿದ್ದು ,ಹೆಚ್ಚಿನದಾಗಿ ಒಂದು ಸಿ ಎ ಪಿಎಫ್ ತುಕಾಡಿ ಸ್ಟ್ರಾಂಗ್ ರೂಮ್ ಬಳಿ ಕರ್ತವ್ಯ ನಿರ್ವಹಿಸಲಿದೆ.
ಮತ ಎಣಿಕಾ ಕೇಂದ್ರದ ಸುತ್ತಮುತ್ತ ಟ್ರಾಫಿಕ್ ಅದ ರೀತಿ ಸಂಚಾರಿ ಪೊಲೀಸರ ನಿಯೋಜನೆ ಮಾಡಲಾಗಿದೆ.ಮತ ಎಣಿಕಾ ಕೇಂದ್ರದ ಸುತ್ತಮುತ್ತ 400 ಸಂಚಾರಿ ಪೊಲೀಸರನ್ನು ಯೋಜನೆ ಮಾಡಲಾಗಿದೆ. ಲೋಕಸಭಾ ಚುನಾವಣೆ ಮತ ಎಣಿಕೆ ಸಂದರ್ಭದಲ್ಲಿ 2400ಕ್ಕೂ ಹೆಚ್ಚು ಪೋಲಿಸರು ನಿಯೋಜನೆ ಮಾಡಲಾಗಿದೆ.