: ಶಿವಮೊಗ್ಗ ಪೊಲೀಸರು ಮೇಜರ್ ಗಾಂಜಾ ಡ್ರೈವ್ ನಡೆಸ್ತಿದ್ದಾರೆ. ಇತ್ತೀಚೆಗೆ ಎಸ್ಪಿ ಮಿಥುನ್ ಕುಮಾರ್ ಗಾಂಜಾ ಸರಭರಾಜು , ಮಾರಾಟ ಮತ್ತು ಅದನ್ನು ಸೇವಿಸ್ತಿರುವವರ ಬಗ್ಗೆ ಮಾಹಿತಿ ಕೊಡಿ ಎಂದು ಖುದ್ದು ಸಂದೇಶ ರವಾನಿಸಿದ್ದರು. ಇದರ ಬೆನ್ನಲ್ಲೆ ಪೊಲೀಸರು ಅಡಿಕೆ ತೋಟವೊಂದರಲ್ಲಿ ಬೆಳದಿದ್ದ ಗಾಂಜಾಗಿಡಗಳನ್ನು ಪೊಲೀಸರು ರೇಡ್ ನಡೆಸಿ ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಪೊಲೀಸ್ ಪ್ರಕಟಣೆ ಹೀಗಿದೆ.
ದಿನಾಂಕ:11-06-2024 ರಂದು ಮಧ್ಯಾಹ್ನ ಕೋಣಂದೂರು ಸಮೀಪದ ಹುತ್ತಳ್ಳಿ ಗ್ರಾಮದ ವಾಸಿ ಗುರುಮೂರ್ತಿಯು ತನ್ನ ವಾಸದ ಮನೆಯ ಹಿಂಭಾಗದ ಅಡಿಕೆ ತೋಟದಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದಾನೆ ಎಂದು ಖಚಿತ ಮಾಹಿತಿಯೊಂದು ಪೊಲೀಸರಿಗೆ ಲಭ್ಯವಾಗಿತ್ತು.
ಈ ಹಿನ್ನೆಲೆಯಲ್ಲಿ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಟೀಂವೊಂದನ್ನ ಸಜ್ಜುಗೊಳಿಸಿದ್ದಾರೆ. ಆ ಬಳಿಕ ಗಜಾನನ ವಾಮನ ಸುತರ, ಪೊಲೀಸ್ ಉಪಾಧೀಕ್ಷಕರು, ತೀರ್ಥಹಳ್ಳಿ ಉಪ ವಿಭಾಗ ರವರ ನೇತೃತ್ವದ ಸಿಬ್ಬಂಧಿಗಳ ತಂಡ, ಮಾಹಿತಿ ಲಭ್ಯವಾದ ಸ್ಥಳಕ್ಕೆ ಹೋಗಿ ದಾಳಿ ನಡೆಸಿದೆ
ಅಲ್ಲದೆ ಅಡಿಕೆ ಗಿಡಗಳ ಮದ್ಯೆ ಬೆಳೆದಿದ್ದ ಅಂದಾಜು ಮೌಲ್ಯ 2,50,000/- ರೂಗಳ 9 ಕೆಜಿ 524 ಗ್ರಾಂ ತೂಕದ ಒಟ್ಟು 14 ಹಸಿ ಗಾಂಜಾ ಗಿಡಗಳನ್ನು ಅಮಾನತ್ತು ಪಡಿಸಿಕೊಂಡು, ಆರೋಪಿತನ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆ ಗುನ್ನೆ ಸಂಖ್ಯೆಃ 0148/2024 ಕಲಂ 8C, 20 ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.