ಬೆಂಗಳೂರು:- ಚುನಾವಣೆ ಬಂತಂದ್ರೆ ಸಾಕು ಹೆಚ್ಚು ಆ್ಯಕ್ಟಿವ್ ಆಗೊ ಪುಡಾರಿಗಳು ಮತದಾರರ ಮೇಲೆ ಪರಿಣಾಮ ಬೀರೊ ಕೆಲಸ ಮಾಡ್ತಾರೆ. ಬೆದರಿಕೆ ಒಡ್ಡಲು ಮುಂದಾಗ್ತಾರೆ. ಹಾಗಾಗಿ ಲೋಕಸಭೆ ಚುನಾವಣೆ ಸಮೀಪಿಸ್ತಿದ್ದಂತೆ ರೌಡಿಶೀಟರ್ ಗಳ ಬೆವರಿಳಿಸಲು ನಗರ ಪೊಲೀಸರು ಮುಂದಾಗಿದ್ದಾರೆ.
ಬೆಂಗಳೂರಿನ ವೈಟ್ ಫೀಲ್ಡ್ ವಿಭಾಗದಲ್ಲಿ ಬೆಳಗ್ಗೆ ನಾಲ್ಕು ಗಂಟೆಗೆ ಪೊಲೀಸರು ದಾಳಿ ನಡೆಸಿದ್ದು, ವಿಭಾಗದ ಎಲ್ಲ ಪೊಲೀಸರಿಂದ ದಾಳಿ ನಡೆದಿದೆ. ಈಗಾಗಲೇ ಹಲವು ರೌಡಿಶೀಟರ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಸುಮಾರು 200 ಕ್ಕೂ ಹೆಚ್ಚು ಜನ ರೌಡಿಗಳ ಮನೆ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ.
ಇನ್ನೂ ಬೆಂಗಳೂರು ನಗರಕ್ಕೂ ಈ ರೌಡಿಸಂಗೂ ಇರುವ ನಂಟು ಇಂದು ನಿನ್ನೆಯದಲ್ಲ. ಅದ್ರಲ್ಲೂ ರಾಜಕಾರಣಿಗಳ ನೆರಳಲ್ಲಿ ಬೆಳಿತಿರೊ ನಟೋರಿಯಸ್ ಗಳ ಸಂಖ್ಯೆಗೇನು ಕಡಿಮೆ ಇಲ್ಲ. ಚುನಾವಣೆ ಬಂತಂದ್ರೆ ಸಾಕು ಹೆಚ್ಚು ಆ್ಯಕ್ಟಿವ್ ಆಗೊ ಪುಡಾರಿಗಳು ಮತದಾರರ ಮೇಲೆ ಪರಿಣಾಮ ಬೀರೊ ಕೆಲಸ ಮಾಡ್ತಾರೆ. ಬೆದರಿಕೆ ಒಡ್ಡಲು ಮುಂದಾಗ್ತಾರೆ. ಹಾಗಾಗಿ ಲೋಕಸಭೆ ಚುನಾವಣೆ ಸಮೀಪಿಸ್ತಿದ್ದಂತೆ ರೌಡಿಶೀಟರ್ ಗಳ ಬೆವರಿಳಿಸಲು ನಗರ ಪೊಲೀಸರು ಮುಂದಾಗಿದ್ದಾರೆ.