ಬೆಂಗಳೂರು ;- ಲಂಚ ಪಡೆದ ಆರೋಪದಲ್ಲಿ ಪೀಣ್ಯಾ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಮಾರೇಗೌಡ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕಟ್ಟಡ ಕಾಮಗಾರಿ ವಿಚಾರವಾಗಿ ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿತ್ತು. ಹೀಗಾಗಿ ದೂರುದಾರ ಗವಿರಾಜಗೌಡ ಕಟ್ಟಡದ ಬಳಿ ರಕ್ಷಣೆಗೆ ಮನವಿ ಮಾಡಿದ್ದರು.
ಈ ವೇಳೆ ಬಂದೋಬಸ್ತ್ ನೀಡಲು ಮೂರು ಲಕ್ಷ ಹಣವನ್ನು ಹೆಡ್ ಕಾನ್ಸ್ ಟೇಬಲ್ ಬೇಡಿಕೆ ಇಟ್ಟಿದ್ದರು. ಅದೇ ರೀತಿ ಒಂದೂವರೆ ಲಕ್ಷ ಹಣ ಅಡ್ವಾನ್ಸ್ ಪಡೆಯೋ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.