ಬೆಂಗಳೂರು: ಬೆಳಗಾವಿಯ ದೊಡ್ಡ ಮೀನಿಗೆ ಗಾಳ ಹಾಕಿ, ಡಿ.ಕೆ ಶಿವಕುಮಾರ್ ಹಿಡಿದಿದ್ದಾರೆ.. ರಮೇಶ್ ಜಾರಕಿಹೊಳಿಯನ್ನ ಅಣಿಯಲು ಲಕ್ಷ್ಮಣ ಸವದಿಯನ್ನ ಕಾಂಗ್ರೆಸ್ ಪಕ್ಷಕ್ಕೆ ಸೆಳೆದಿದ್ದಾರೆ. ಅಥಣಿ ಟಿಕೆಟ್ ಕೈ ತಪ್ಪಿದ್ದಕ್ಕೆ, ಬಿಜೆಪಿ ಹೈಕಮಾಂಡ್ ವಿರುದ್ಧವೇ ಸವದಿ ಸಮರ ಸಾರಿದ್ದು, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.. ಈಗ ಬೆಳಗಾವಿಯ ರಾಜಕೀಯ ಚಿತ್ರಣವೇ ಬದಲಾಗಿಬಿಟ್ಟಿದೆ..
ಯೆಸ್.. ಚುನಾವಣೆ ಹತ್ತಿರ ಬರ್ತಿದ್ದಂತೆ ಜಂಪಿಂಗ್ ಪಾಲಿಟಿಕ್ಸ್ ಜೋರಾಗಿದೆ. ಆ ಕಡೆಯಿಂದ ಈ ಕಡೆ, ಈ ಕಡೆಯಿಂದ ಆ ಕಡೆ ನೆಗೆಯೋರ ಸಂಖ್ಯೆ ಜಾಸ್ತಿ ಆಗಿದೆ. ಬೆಳಗಾವಿಯ ಬಿಜೆಪಿ ಪ್ರಭಾವಿ ನಾಯಕ, ಮಾಜಿ ಡಿಸಿಎಂ ಕಾಂಗ್ರೆಸ್ ತೆಕ್ಕೆಗೆ ಬಿದ್ದು ಬಿಟ್ಟಿದ್ದಾರೆ. ಅಥಣಿ ಟಿಕೆಟ್ ಕೈ ತಪ್ಪಿದ್ದರಿಂದ, ಕಮಲ ಬ್ರಿಗೇಡ್ ವಿರುದ್ಧ ಸಮರ ಸಾರಿ, ಅಧಿಕೃತವಾಗಿ ಕಾಂಗ್ರೆಸ್ ಸೇರಿದ್ದಾರೆ. ಮೊದಲಿನಿಂದಲೂ ಅಥಣಿಯ ಬಿಜೆಪಿ ಟಿಕೆಟ್ ಗಾಗಿ ಸಿಕ್ಕಾಪಟ್ಟೆ ಲಾಬಿ ನಡೆಸ್ತಾ ಇದ್ರು. ಆದ್ರೆ ರಮೇಶ್ ಜಾರಕಿಹೊಳಿ ಪ್ರಭಾವ ಬೀರಿ, ತಮ್ಮ ಆಪ್ತ ಮಹೇಶ್ ಕುಮಟಳ್ಳಿಗೆ ಟಿಕೆಟ್ ಕೊಡಿಸಿದ್ರು. ಇದನ್ನ ಲಕ್ಷ್ಮಣ ಸವದಿ ಸಹಿಸಲಿಲ್ಲ.. ವಲಸಿಗರಿಗೆ ಟಿಕೆಟ್ ಕೊಟ್ಟು ಮೂಲ ಬಿಜೆಪಿಗರನ್ನ ಕಡೆಗಣಿಸಿದ್ದಾರೆಂದು ಆಕ್ರೋಶ ಹೊರಹಾಕಿದ್ರು.. ಬೆಂಬಲಿಗರ ಸಭೆ ಕೂಡ ನಡೆಸಿ ಬಿಜೆಪಿ ತೊರೆಯೋ ಬಗ್ಗೆ ಮಾತುಗಳನ್ನಾಡಿದ್ರು.. ಈಗ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿ, ಬಿಜೆಪಿಯ ರಾಜ್ಯ, ಕೇಂದ್ರ ನಾಯಕರ ವಿರುದ್ಧ ಸಮರ ಸಾರಿದ್ದಾರೆ.. ತಮ್ಮ ಕಡು ರಾಜಕೀಯ ವಿರೋಧಿ ರಮೇಶ್ ಜಾರಕಿಹೊಳಿಗೆ ನೇರವಾಗಿ ಸಂದೇಶ ರವಾನೆ ಮಾಡಿದ್ದು, ಅಥಣಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.
ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿಯನ್ನ ಅಣಿಯಲು ಲಕ್ಣ್ಮಣ ರೇಖೆಯನ್ನೇನೋ ಎಳೆದ್ರು. ಆದ್ರೆ ಸತೀಶ್ ಜಾರಕಿಹೊಳಿ ಸಹೋದರನ ವಿರುದ್ಧ ನಿಲ್ತಾರಾ..? ಇಲ್ಬಾ..? ಅನ್ನೋ ಪ್ರಶ್ನೆಗಳು ಎದುರಾಗಿವೆ. ಸವದಿ ಕಾಂಗ್ರೆಸ್ ಸೇರ್ಪಡೆಗೆ ಸತೀಶ್ ಜಾರಕಿಹೊಳಿ ವಿರೋಧ ವ್ಯಕ್ತಪಡಿಸಿದ್ರು. ಅದ್ರ ಹೊರತಾಗಿಯೂ ಡಿ.ಕೆ ಶಿವಕುಮಾರ್, ಸವದಿಯನ್ನ ಪಕ್ಷಕ್ಕೆ ಕರೆತಂದಿದ್ದಾರೆ.. ಸತೀಶ್ ಮನವೊಲಿಕೆ ಕೆಲಸಗಳು ನಡೀತಾ ಇದ್ರೂ, ಅದೂ ಸಾಧ್ಯವಾಗುತ್ತಾ ಎನ್ನೋ ಪ್ರಶ್ನೆಗಳು ಎದ್ದಿವೆ.. ಬೇರೆ ಬೇರೆ ಪಕ್ಷಗಳಲ್ಲಿದ್ರೂ ಜಾರಕಿಹೊಳಿ ಫ್ಯಾಮಿಲಿ ಒಬ್ಬರಿಗೊಬ್ಬರು ಸಪೋರ್ಟ್ ಮಾಡಿಕೊಂಡು ಬಂದಿದ್ದಾರೆ. ಈಗ ಲಕ್ಷ್ಮಣ ಸವದಿ ಎಂಟ್ರಿಯಿಂದ ಇಡೀ ಬೆಳಗಾವಿಯ ರಾಜಕೀಯ ಚಿತ್ರಣವೇ ಬದಲಾಗ್ತಿದೆ. ಅಕ್ಕಪಕ್ಕದ ಜಿಲ್ಲೆಗಳಲ್ಲೂ ರಾಜಕೀಯ ಚದುರಂಗದಾಟ ಶುರುವಾಗಿದೆ. ಇದ್ರ ಜೊತೆಗೆ ಲಕ್ಷ್ಮೀ ಹೆಬ್ಬಾಳ್ಕರ್ ಎಂಟ್ರಿಯಿಂದ ಜಾರಕಿಹೊಳಿ ಫ್ಯಾಮಿಲಿಯಲ್ಲಿ ಪೊಲಿಟಿಕಲ್ ವಾರ್ ಏರ್ಪಟ್ಟಂತೆ ಕಾಣ್ತಾ ಇದೆ..
ಇನ್ನು ಬೆಳಗ್ಗೆಯೇ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚೆನ್ನರಾಜ್ ಹಟ್ಟಿಹೊಳಿ ಜೊತೆ ಬೆಳಗಾವಿಯಲ್ಲಿ ಏರ್ ಪೋರ್ಟ್ ನಲ್ಲಿ ಸವದಿ ಕಾಣಿಸಿಕೊಂಡಿದ್ರು. ಕಾಂಗ್ರೆಸ್ ಸೇರ್ಪಡೆ ಕೂಡ ಖಚಿತವಾಗಿತ್ತು. ಸವದಿ ತಮ್ಮ ಗಾಳಕ್ಕೆ ಬೀಳ್ತಿದ್ದಂತೆ, ಬೆಳಗಾವಿಯಿಂದ ಬೆಂಗಳೂರಿಗೆ ಕರೆತರಲು ಸ್ಪೆಶಲ್ ಫ್ಲೈಟ್ ಕೂಡ ಡಿಕೆಶಿ ಅರೆಂಜ್ ಮಾಡಿಬಿಟ್ಟಿದ್ರು. ಬೆಂಗಳೂರಿಗೆ ಬಂದ ತಕ್ಷಣ, ಅಜ್ಞಾತ ಸ್ಥಳದಲ್ಲಿ ಸುರ್ಜೇವಾಲಾ ಜೊತೆ ಗೌಪ್ಯ ಸಭೆ ನಡೆಸಿದ್ರು. ನಂತ್ರ ಸಿದ್ದರಾಮಯ್ಯ ನಿವಾಸಕ್ಕೆ ಸವದಿಯನ್ನ ಕರೆತಂದ್ರು. ಲಕ್ಷ್ಮಣ ಸವದಿಯ ಡಿಮ್ಯಾಂಡ್ಸ್ ಎಲ್ಲಾ ಕೇಳಿಕೊಂಡು, ಅಥಣಿ ಟಿಕೆಟ್ ಘೋಷಿಸಿದ್ರು. ಬೆಳಿಗ್ಗೆಯಿಂದ ಸಂಜೆ ವರೆಗೆ ಸವದಿ ಕಾಂಗ್ರೆಸ್ ಸೇರ್ಪಡೆ ಮೇಲೆಯೇ, ರಾಜಕೀಯ ದಿಗ್ಗಜರು ಕಣ್ಣಾಯಿಸಿದ್ರು.
ಒಟ್ಟಿನಲ್ಲಿ ಇದು ಕಾಂಗ್ರೆಸ್ ವರ್ಸಸ್ ಬಿಜೆಪಿ ಅನ್ನೋದಕ್ಕಿಂತ, ಲಕ್ಷ್ಣಣ ಸವದಿ ವರ್ಸಸ್ ರಮೇಶ್ ಜಾರಕಿಹೊಳಿ ನಡುವಿನ ವಾರ್ ಆಗಿದೆ.. ಅಥಣಿಯಲ್ಲಿ ಸವದಿ ಹಾಗೂ ಮಹೇಶ್ ಕುಮಟಳ್ಳಿ ನಡುವೆ ಹೈವೋಲ್ಟೇಜ್ ಕದನ ನಡೆಯೋದಂತೂ ಪಕ್ಕಾ ಆಗಿದೆ. ಎಲ್ಲಿ ಕಡೆಗಣಿಸಿದ್ರೋ ಅಲ್ಲಿಂದನೇ ಸಿಡಿದೇಳೋ ಎಚ್ಚರಿಕೆಯನ್ನ ಸವದಿ ರವಾನೆ ಮಾಡಿದ್ರೆ, ಆಪ್ತನನ್ನ ಗೆಲ್ಲಿಸಿಕೊಂಡು, ಟ್ರಬಲ್ ಶೂಟರ್ ಗೆ ಟ್ರಬಲ್ ಕೊಡಲು ಸಾಹುಕಾರ್ ರಣತಂತ್ರ ನಡೆಸ್ತಾ ಇದ್ದಾರೆ.. ಬೆಳಗಾವಿಯಲ್ಲಿ ಸದ್ಯದ ಬೆಳವಣಿಗೆಗಳಿಂದ ಭಾರೀ ಟ್ವಿಸ್ಟ್ ಗಳು ಹೊರಬೀಳಲಿವೆ.