ಬೆಂಗಳೂರು ;– ಅಕ್ಕಿ ರಾಜಕಾರಣದ ಬಗ್ಗೆ ಎಂ ಬಿ ಪಾಟೀಲ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಸದಾಶಿವ ನಗರದಲ್ಲಿ ಮಾತನಾಡಿದ ಅವರು, ಸಿಎಂ ಈಗಾಗಲೇ ಗಂಭೀರ ಪ್ರಯತ್ನ ಮಾಡ್ತಾ ಇದಾರೆ. ಛತ್ತೀಸ್ ಗಡ ರಾಜ್ಯದ ಜೊತೆ ಮಾತಾಡಿದ್ದಾರೆ. ಆದರೆ ಟ್ರಾನ್ಸ್ಪೋರ್ಟ್ ಖರ್ಚನ್ನು ಕೂಡಾ ನೋಡಬೇಕು. ನಾವೇನು ಕೇಂದ್ರ ಸರ್ಕಾರದ ಬಳಿ ಸುಮ್ಮನೆ ಕೊಡಲು ಕೇಳ್ತಾ ಇಲ್ಲ. ಹಣ ಕೊಡ್ತೀವಿ ಅಂತಾ ಕೇಳ್ತಾ ಇದೀವಿ. ಬಡವರ ವಿಚಾರದಲ್ಲಿ ರಾಜಕಾರಣ ಮಾಡಬಾರದು. ನಮ್ಮ ಸಂಸದರಿಗೆ ಸಚಿವರಿಗೆ ದೇವರು ಒಳ್ಳೆಯ ಬುದ್ದಿ ಕೊಡಲಿ” ಎಂದರು.
ಬಿ.ಎಲ್. ಸಂತೋಷ್, ಅದಾನಿ ಉದ್ಯಮಗಳಿಗೆ ರಾಜ್ಯಕ್ಕೆ ಆಹ್ವಾನ ಎಂಬ ಟ್ವೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾನಾಡಿದ ಅವರು, “ಯಾವುದೇ ಗ್ರೂಪ್ ಇರಲಿ, ಕೈಗಾರಿಕೋದ್ಯಮಿಗಳ ಸಭೆ ಕರೆಯಲಾಗಿತ್ತು. ಅವರು ಸಲಹೆ-ಸೂಚನೆ ನೀಡಿದ್ರು. ನಾನು ಪಾರದರ್ಶಕವಾಗಿ ಉದ್ಯಮ ಸ್ಥಾಪಿಸುವವರಿಗೆ ಸ್ವಾಗತ ಅಂತ ಹೇಳಿದ್ದೆ” ಎಂದು ತಿಳಿಸಿದರು.
ಅಧಿಕಾರ ಹಂಚಿಕೆ ಬಗ್ಗೆ ಹೈಕಮಾಂಡ್ ನಿಂದ ಯಾವುದೇ ಮಾಹಿತಿ ಇಲ್ಲ. ಸುದ್ದಿಗೋಷ್ಠಿಯಲ್ಲಿ ಹೇಳಿದಷ್ಟೇ ಮಾಹಿತಿ ಇದೆ, ಎಂದು ಎಂ.ಬಿ. ಪಾಟೀಲ್ ಹೇಳಿದರು. ಬೇರೆಯವರಿಗೆ ಹೊಡೆಯುವ ತಾಕತ್ತು ಇದೆ. ಬೇರೆಯವರ ಮೇಲೆ ಹೊಡೆಯುವ ರಾಜಕೀಯ ಇಲ್ಲ. ಜಾತಿ ತಂದು ಎಳೆಯೋದು ಸರಿಯಲ್ಲ. ವಿಮಾನ ನಿಲ್ದಾಣಗಳನ್ನ ರಾಜ್ಯ ಸರ್ಕಾರ ನಿರ್ವಹಣೆ ಮಾಡುವ ಚಿಂತನೆ ಇದೆ. ಈ ತಿಂಗಳ ಅಂತ್ಯಕ್ಕೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡ್ತೇವೆ ಎಂದರು.