ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದಲ್ಲಿ ಮೂಡಿ ಬಂದ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೀಗ ಪೊನ್ನಿಯನ್ ಸೆಲ್ವನ್ 2 ಸಿನಿಮಾ ರಿಲೀಸ್ ಆಗಿದ್ದು ಸಿನಿಮಾದ ಮೊದಲ ವಿಮರ್ಶೆ ಎನ್ನುವಂತೆ ಬಾಲಿವುಡ್ ನ ಸ್ವಯಂ ಘೋಷಿತ ವಿಮರ್ಶಕ ಉಮೈರ್ ಸಂಧು ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾದ ಕುರಿತು ಬರೆದುಕೊಂಡಿದ್ದಾರೆ.
‘ಅದೊಂದು ಬೋರ್ ಸಿನಿಮಾ. ಬೇಸರ ತರಿಸುತ್ತದೆ. ಸಿನಿಮಾ ನೋಡದೇ ಇದ್ದರೂ ಪರ್ವಾಗಿಲ್ಲ’ ಎಂದು ಬರೆದುಕೊಂಡಿದ್ದು, ನೆಟ್ಟಿಗರು ಉಮೈರ್ ಸಂಧು ಮೇಲೆ ಆಕ್ರೋಶ ಹೊರ ಹಾಕಿದ್ದಾರೆ.
ನೂರಾರು ಕೋಟಿ ಬಜೆಟ್ ನಲ್ಲಿ ತಯಾರಾದ ಚಿತ್ರ ಪೊನ್ನಿಯಿನ್ ಸೆಲ್ವನ್ 2. ಇದರ ಮೊದಲ ಭಾಗ ಸೂಪರ್ ಹಿಟ್ ಆಗಿತ್ತು. ಹಾಗಾಗಿಯೇ ಎರಡನೇ ಭಾಗವನ್ನು ಚಿತ್ರೀಕರಿಸಿದ್ದಾರೆ ಮಣಿರತ್ನಂ. ಇದೇ ವಾರದಲ್ಲಿ ಸಿನಿಮಾ ರಿಲೀಸ್ ಆಗುತ್ತಿದ್ದು, ದೇಶದಾದ್ಯಂತ ಚಿತ್ರತಂಡ ಪ್ರಚಾರ ಮಾಡುತ್ತಿದೆ. ಈ ಸಂದರ್ಭದಲ್ಲಿ ಸಂಧು ಮಾಡಿರುವ ಟ್ವೀಟ್ ಆಕ್ರೋಶಕ್ಕೆ ಕಾರಣವಾಗಿದೆ.
ಪೊನ್ನಿಯಿನ್ ಸೆಲ್ವನ್ ಭಾಗ ಒಂದು ರಿಲೀಸ್ ಆದಾಗಲೂ, ಇದೇ ಉಮೈರ್ ಸಿನಿಮಾದ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡಿದ್ದ. ಸ್ವತಃ ಮಣಿರತ್ನಂ ಪತ್ನಿ ಸುಹಾಸಿನಿ ಉಮೈರ್ ನನ್ನು ತರಾಟೆಗೆ ತಗೆದುಕೊಂಡಿದ್ದರು. ಸಿನಿಮಾ ಬಿಡುಗಡೆಗೂ ಮುನ್ನ ಹೇಗೆ ರಿವಿವ್ಯೂ ಮಾಡಿದ್ದೀಯಾ ಎಂದು ಕೇಳಿದ್ದರು. ಸಿನಿಮಾ ನೋಡದೇ ಹೀಗೆ ಕಾಮೆಂಟ್ ಮಾಡುವುದು ಸರಿಯಲ್ಲ ಎಂದು ಬುದ್ದಿವಾದ ಹೇಳಿದ್ದರು. ಅದಾಗ್ಯೂ ಇದೀಗ ಉಮೈರ್ ತಮ್ಮ ಹಳೆಯ ಚಾಳಿಯನ್ನೇ ಮುಂದುವರೆಸಿದ್ದಾರೆ.