ಕೋಲಾರ: ಪ್ರಧಾನಿ ಮೋದಿ ರಾಜ್ಯದಲ್ಲಿ ಪ್ರವಾಹ ಉಂಟಾದಾಗ, ಕೋಲಾರದಲ್ಲಿ ಮಾವಿನ ಬೆಳೆ ಕುಸಿದಾಗ ಬರಲಿಲ್ಲ. ಕೋಲಾರ ಜನರಿಗೆ ಅವಶ್ಯವಾಗಿ ಬೇಕಿರುವ ನೀರಾವರಿ ಸೌಲಭ ಕೊಡಲು ಬರಲಿಲ್ಲ. ಈಗ ಎಡಗೈನಲ್ಲಿ ಟಾಟಾ ಮಾಡಿ ಬಿಜೆಪಿ ಅಭ್ಯರ್ಥಿಗಳನ್ನಜ ಗೆಲ್ಲಿಸಿ ಎಂದು ಮನವಿ ಮಾಡಲು ಕೋಲಾರ ಜಿಲ್ಲೆಗೆ ಆಗಮಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವ್ರು ಹೇಳಿದ್ರು. ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ್ರು.
ಖಾಸಗಿ ಸಮೀಕ್ಷೆಗಳನ್ನು ಯಾರು ನಂಬಬೇಡಿ ಜನ ಬಲವಿದ್ದರೂ ನನಗೆ ಹಣದ ಕೊರತೆ ಇದೆ ಬಿಜೆಪಿ ಪಕ್ಷದ ತರ ಕಮೀಷನ್ ಪಡೆದು ಕೊಂಡಿದ್ದರೆ ಇವತ್ತು ದುಡ್ಡು ಚೆಲ್ಲಿ ಮತವನ್ನು ಪಡೆಯಬಹುದಿತ್ತು ಆದರೆ ಅಂತಹ ದೊಡ್ಡ ಕುಟುಂಬದಿಂದ ನಾನು ಬಂದಿಲ್ಲ ಎಂದು ತಿಳಿಸಿದ್ರು. ಅಲ್ಲದೆ ‘ಬಂಗಾರಪೇಟೆಯಲ್ಲಿ 2006ರಲ್ಲಿ ಯರಗೋಳು ಜಲಾಶಯ ನಿರ್ಮಾಣಕ್ಕೆ ಚಾಲನೆಯನ್ನು ನೀಡಲಾಗಿತ್ತು ಅದು ಈಗ ತುಂಬಿದೆ. ಆದರೆ, ಆ ನೀರನ್ನು ಬಳಸುವ ಕೆಲಸವನ್ನು ದರಿದ್ರ ಬಿಜೆಪಿ ಸರ್ಕಾರ ಮಾಡಲಿಲ್ಲ. ಜಲಾಶಯ ತುಂಬಿ ತಮಿಳುನಾಡಿಗೆ ನೀರು ಹರಿದು ಹೋಗುತ್ತಿದೆ ಎಂದು ತಿಳಿಸಿದ್ರು.