ಗದಗ:- ಕಳಪೆ ರೇಷನ್ ವಿತರಣೆ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.
ತಾಲೂಕಿನ ಕೋಟುಮಚಗಿ ಗ್ರಾಮದ ನ್ಯಾಯಬೆಲೆ ಅಂಗಡಿಗಳಲ್ಲಿ ತಿನ್ನಲು ಯೋಗ್ಯವಲ್ಲದ ಕಳಪೆ ಗುಣಮಟ್ಟದ ರೇಷನ್ ಹಂಚಿಕೆಗೆ ಸಾರ್ವಜನಿಕರು ಕಿಡಿಕಾರಿದ್ದಾರೆ.
ಪಡಿತರ ಚೀಟಿಗೆ ವಿತರಣೆ ಮಾಡುವ ಜೋಳದಲ್ಲಿ ಹಾಗೂ ಅಕ್ಕಿಯಲ್ಲಿ ಹುಳು ಕಂಡು ಗ್ರಾಹಕರು ಆಕ್ರೋಶ ಹೊರ ಹಾಕಿದ್ದಾರೆ. ಪ್ರತಿ ಗ್ರಾಹಕರಿಗೆ ೩ ಕೇಜಿ ಜೋಳ ಕೊಡ್ತಾರೆ. ಆದರೆ ಗಲೀಜು ತುಂಬಿರೋ ಜೋಳ ವಿತರಣೆ ಮಾಡ್ತಿದ್ದಾರೆ.
ನಮ್ಮ ಆರೋಗ್ಯದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ ಅಂತ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.