ಭುವನೇಶ್ವರ್: ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಭಾಷಣ ಮಾಡುತ್ತಿದ್ದಾಗ ವಿದ್ಯುತ್ಕಡಿತಗೊಂಡ (Power Outage) ಘಟನೆ ಓಡಿಶಾದ (Odisha) ಬರಿಪಾದದ ಮಹಾರಾಜ ಶ್ರೀರಾಮಚಂದ್ರ ಭಂಜಾ ದೇವು ವಿಶ್ವವಿದ್ಯಾಲಯದಲ್ಲಿ ನಡೆದಿದೆ.
ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ನಡೆದ 12ನೇ ಘಟಿಕೋತ್ಸವದಲ್ಲಿ ಈ ಘಟನೆ ನಡೆದಿದೆ. ರಾಜ್ಯಪಾಲ ಗಣೇಶಿ ಲಾಲ್ ಸಭಿಕರನ್ನು ಉದ್ದೇಶಿಸಿ ಮಾತನಾಡಿದ್ದರು. ಇದಾದ ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಮಾಡುತ್ತಿದ್ದರು. ಈ ವೇಳೆ ವಿದ್ಯುತ್ ಕಡಿತಗೊಂಡಿದೆ.
ಇದರಿಂದಾಗಿ ವಿದ್ಯುತ್ ಕಡಿತದಿಂದಾಗಿ ರಾಷ್ಟ್ರಪತಿ ಮುರ್ಮು ಮಂದ ಬೆಳಕಿನಲ್ಲೇ ಭಾಷಣವನ್ನು ಮಾಡಬೇಕಾದ ಪರಿಸ್ಥಿತಿ ಉಂಟಾಯಿತು. ಘಟನೆಯಿಂದಾಗಿ ರಾಷ್ಟ್ರಪತಿಯ ಭದ್ರತಾ ಸಿಬ್ಬಂದಿಗೆ ವಿದ್ಯುತ್ ವೈಫಲ್ಯದಿಂದಾಗಿ 9 ನಿಮಿಷಗಳ ಕಾಲ ಭದ್ರತೆ ಒದಗಿಸಲು ಸಮಸ್ಯೆ ಎದುರಾಯಿತು. ಇದರಿಂದಾಗಿ ಓಡಿಶಾ ಸರ್ಕಾರ ಮುಜುಗರಕ್ಕೆ ಒಳಗಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ ಕಾರ್ಯಕ್ರಮಕ್ಕೆ ಬ್ಯಾಕಪ್ ಜನರೆಟರ್ಗಳನ್ನು ಬಳಸಲಾಗಿತ್ತು. ಆದರೆ ಭಾಷಣ ಸಂದರ್ಭದಲ್ಲಿ ಕೆಲವು ತಾಂತ್ರಿಕ ತೊಂದರೆ ಉಂಟಾಗಿ ಈ ರೀತಿಯಾಗಿದೆ. ಸಂಪೂರ್ಣ ವೈಫಲ್ಯಕ್ಕಾಗಿ ವಿಶ್ವವಿದ್ಯಾನಿಲಯದ ಸಿಬ್ಬಂದಿಗೆ ಸಮನ್ಸ್ ನೀಡಲಾಗಿದೆ ಎಂದು ಮಯೂಭರ್ಂಜ್ ಕಲೆಕ್ಟರ್ ವಿನೀತ್ ಭಾರದ್ವಾಜ್ ಹೇಳಿದ್ದಾರೆ.