ಬೆಂಗಳೂರು:- ಇಂದಿನಿಂದ ಎರಡು ದಿನ ನಗರದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ಹೊರಡಿಸಿದೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಬೆಸ್ಕಾಂ 66/11 ಕೆವಿ ಬಾಣಸವಾಡಿ ವಿದ್ಯುತ್ ಉಪಕೇಂದ್ರದಲ್ಲಿ ಮತ್ತು ಹೆಣ್ಣೂರು ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಪವರ್ ಕಟ್ ಇರಲಿದೆ.
ಬಿವಿಕೆ ಅಯ್ಯಂಗರ್ ರಸ್ತೆ, ಕೆಜಿ ರಸ್ತೆ, ನೃಪತುಂಗ ರಸ್ತೆ, ಅರಮನೆ ರಸ್ತೆ, ಬಾಲಬ್ರೂಯಿ ಗೆಸ್ಟ್ ಹೌಸ್, ಗಾಂಧಿನಗರ, ಚಿಕ್ಕಪೇಟೆ, ಶೆಷಾದ್ರಿಪುರಂ, ರೇಸ್ ಕೋರ್ಸ್, ಮೈಸೂರು ಬ್ಯಾಂಕ್ ಸರ್ಕಲ್, ಅವೆನ್ಯೂ ರಸ್ತೆ, ಕಬ್ಬನ್ ಪೇಟೆ, ಮಹಾರಾಣಿ ಕಾಲೇಜು, ಕುಮಾರ ಪಾರ್ಕ್, ಶಿವಾನಂದ ಸರ್ಕಲ್, ಗೃಹ ಮಂತ್ರಿಗಳ ಕ್ವಾರ್ಟರ್ಸ್, ಕಾವೇರಿ ಭವನ, ಉಪ್ಪಾರಪೇಟೆ, ಲಿಂಗಶೆಟ್ಟಿ ಪೇಟೆ, ಅನ್ನದಾನಪ್ಪ ಬಡಾವಣೆ, ಆನಂದ ರಾವ್ ಸರ್ಕಲ್, ಚಾಲುಕ್ಯ ಸರ್ಕಲ್ ಇಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಇನ್ನು, ಮಿನರ್ವ ಮಿಲ್, ಕುಮಾರ ಕೃಪ ಅಥಿತಿ ಗೃಹ, ಮೆಜೆಸ್ಟಿಕ್ ಕೆಂಪೇಗೌಡ ಬಸ್ ನಿಲ್ದಾಣ, ಮೆಜೆಸ್ಟಿಕ್ ಕೆಎಸ್ ಅರ್ ರೈಲ್ವೇ ಸ್ಟೇಷನ್, ಶೋಭಾ ಇಂಧ್ರಪ್ರಸ್ಥ ಅಪಾರ್ಟ್ಮೆಂಟ್, ಶಾಂತಲಾ ಸಿಲ್ಕ್ ಹೌಸ್, ಕಾಟನ್ ಪೇಟೆ, ಧರ್ಮರಾಯ ಸ್ವಾಮಿ ದೇವಸ್ಥಾನ ಬಡಾವಣೆ, ವಿಠಲ ಮಲ್ಯ ರಸ್ತೆ, ಕಾರ್ಪೋರೇಷನ್ ಸರ್ಕಲ್, ಕಬ್ಬನ್ ಪೇಟೆ, ಶೇಷಾದ್ರಿಪುರಂ ರಸ್ತೆ, ಸಿಎಂ ಮನೆ ರೋಡ್, ಸದಾಶಿವನಗರ ಸುತ್ತಮುತ್ತ, ಕ್ರೆಸೆಂಟ್ ರೋಡ್ , ಸೆವೆನ್ ಮಿನಿಸ್ಟರ್ ಕ್ವಾಟ್ರಸ್, ಕುಮಾರಪಾರ್ಕ್ ರೋಡ್, ಗಾಂದಿನಗರ, ಆನಂದ ರಾವ್ ಸರ್ಕಲ್, ಕೆಪಿಟಿಸಿಎಲ್ ಕಚೇರಿಗಳು, ರೇಸ್ ಕೋರ್ಸ್, ವಸಂತನಗರ ಸುತ್ತಮುತ್ತ ಕರೆಂಟ್ ಇರುವುದಿಲ್ಲ. ಇನ್ನು, ಅರಮನೆ ರಸ್ತೆ, ಕಾಟನ್ ಪೇಟೆ, ಮಾಗಡಿ ರಸ್ತೆ ಸುತ್ತಮುತ್ತ, ಆರ್ಬಿಐ, ನಗರ್ತಪೇಟೆ, ಮಾರ್ಥಾಸ್ ರೋಡ್, ಎಸ್ಪಿ ರೋಡ್, ಚಿಕ್ಕಪೇಟೆ, ವಿಠಲ್ ಮಲ್ಯ ರೋಡ್, ಮಂತ್ರಿಮಾಲ್, ಮಲ್ಲೇಶ್ವರಂ ಸುತ್ತಮುತ್ತ ವಿದ್ಯುತ್ ಇರುವುದಿಲ್ಲ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ
ನಾಳೆ ಹೆಣ್ಣೂರು ಬಂಡೆ, ಸಮುದ್ರಿಕಾ ಎನ್ಕ್ಲೀವ್, ಗ್ರೇಸ್ ಗಾರ್ಡನ್, ಕ್ರಿಸ್ಟ್ ಜಯಂತಿ ಕಾಲೇಜ್, ಕೆ.ನಾರಾಯಣಪುರ, ಬಿಳಿಶಿವಾಲೆ, ಆಶಾ ಟೌನ್ಶಿಪ್, ಐಶ್ವರ್ಯ ಲೇಔಟ್, ಮಾರುತಿ ಟೌನ್ಶಿಪ್, ನಗರಗಿರಿ ಟೌನ್ಶಿಪ್, ಕೆ.ನಾರಾಯಣಪುರ ಕ್ರಾಸ್, ಬಿ.ಡಿ.ಎಸ್. ಗಾರ್ಡನ್, ಕೊತನೂರು. ಪಟೇಲ್ ರಾಮಯ್ಯ ಲೇಔಟ್, ಅಂಜನಪ್ಪ ಲೇಔಟ್, ಸಿ.ಎಸ್.ಐ ಗೇಟ್, ಬೈರತಿ ಕ್ರಾಸ್, ಬೈರತಿ ಹಳ್ಳಿ, ಎವರ್ ಗ್ರೀನ್ ಲೇಔಟ್, ಕನಕ ಶ್ರೀ ಲೇಔಟ್, ಗೆದ್ದಲ ಹಳ್ಳಿ, ಬ್ಲೆಸ್ಸಿಂಗ್ ಗಾರ್ಡನ್, ಮಂತ್ರಿ ಅಪಾರ್ಟ್ ಮೆಂಟ್, ಹಿರೇಮಠ ಲೇಔಟ್, ಟ್ರಿನಿಟಿ ಫಾರ್ಚೂನ್ ವಿದ್ಯುತ್ ವ್ಯತ್ಯಯವಾಗಲಿದೆ.