ಧಾರವಾಡ ;– ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ವಿಚಾರವಾಗಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ರಾಜ್ಯ ಸಾಲದ ಕೂಪಕ್ಕೆ ಹೋಗುವ ಲಕ್ಷಣಗಳು ಎದ್ದು ಕಾಣಸ್ತಿವೆ ಎಂದಿದ್ದಾರೆ.
ಬಜೆಟ್ ನಿಂದ ರಾಜ್ಯ ಸಾಲದ ಕೂಪಕ್ಕೆ ಹೋಗುವ ಲಕ್ಷಣಗಳು ಎದ್ದು ಕಾಣುತ್ತಿದೆ. ಪದೇ ಪದೆ ಭಾರತ ಸರ್ಕಾರದ ಮೇಲೆ ಮಂತ್ರಿಗಳು ಸಚಿವರು ಆರೋಪ ಮಾಡ್ತಿದ್ದಾರೆ. ಜುಲೈ 1ಕ್ಕೆ ನೀಡಿರುವ ಅಕ್ಕಿಯೂ ಕೇಂದ್ರ ಸರ್ಕಾರದ್ದು, ಕರ್ನಾಟಕ ಸೇರಿ 80 ಕೋಟಿ ಜನರಿಗೆ ಅಕ್ಕಿ ವಿತರಣೆ ಮಾಡಿದ್ದೇವೆ ಎಂದು ತಿಳಿಸಿದರು.
ಈ ಅಕ್ಕಿಯನ್ನು ಕೇಂದ್ರ ಸರ್ಕಾರದಿಂದ ಕೊಟ್ಟಿದ್ದೇವೆ. ನೀವು ರಾಜ್ಯ ಸರ್ಕಾರ ಅಕ್ಕಿಯನ್ನು ಕೊಟ್ಟಿಲ್ಲ. ಅದನ್ನ ನೀವು ಒಪ್ಪಿ ಕೊಳ್ಳಲೇಬೇಕು. ಎಲ್ಲ ಯೋಜನೆ ಅನಗತ್ಯ ಷರತ್ತು ಹಾಕಲಾಗಿದೆ. ಗ್ಯಾರಂಟಿ ಯೋಜನೆ ಷರತ್ತು ವಿಧಿಸಲಾಗುತ್ತಿದ್ದು, ಆ ಮೂಲಕ ನೀವು ಜನರಿಗೆ ಮೋಸ ಮಾಡಿದ್ದೀರಿ. ಸಿಎಂ ಕಾರ್ಯಾವಧಿ ಶುರುವಾಗುತ್ತಿದ್ದಂತೆ ವರ್ಗಾವಣೆಯಲ್ಲಿ ಅನೇಕ ಕಡೆ ಒಂದೊಂದು ಪೋಸ್ಟಿಗೆ ನಾಲ್ಕು ನಾಲ್ಕು ಪತ್ರ ಕೊಡುತ್ತಿದ್ದಾರೆ ಎಂದು ದೂರಿದರು.
ವರ್ಗಾವಣೆ ಜೊತೆಗೆ ವಸೂಲಿ ಕೂಡ ಶುರುವಾಗಿದೆ. ಭ್ರಷ್ಟಾಚಾರ ಅಂತಾ ಮಾತನಾಡಿ ಬಂದ್ರೂ..! ಈಗ ವಸೂಲಿ ಕೆಲಸ ಆರಂಭ ಮಾಡಿದ್ದಾರೆ. ನೀವು ಮಾಧ್ಯಮದವರು ಕೂಡ ಆಂತರಿಕವಾಗಿ ತನಿಖೆ ಮಾಡಿ, ಯಾವ ರೀತಿ ವಸೂಲಿ ಆಗುತ್ತೆ ಅನೋದು ಗೊತ್ತಾಗುತ್ತದೆ. ಕನಿಷ್ಠ ಆರು ತಿಂಗಳಾದರೂ ಕೆಲಸ ಸರಿಯಾಗಿ ಮಾಡಿ ಎಂದು ಜೋಶಿ ಸಲಹೆ ನೀಡಿದರು.