ಧಾರವಾಡ: ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದ ಕೋಟೂರು ಗ್ರಾಮದ ಪ್ರವೀಣ್ ಕಮ್ಮಾರ ಹತ್ಯೆ ವಿಷಯನ್ನು ನಾನು ಸರಳವಾಗಿ ಬಿಡುವುದಿಲ್ಲ. ಅಧಿಕಾರಿಗಳು ನಿಸ್ಪಕ್ಷಪಾತವಾಗಿ ಕೆಲಸ ಮಾಡಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ವಿಧಿಸಬೇಕು. ಅಧಿಕಾರಿಗಳು ವಿಳಂಬ ಮಾಡಿದರೆ ಅಧಿಕಾರಿಗಳ ವಿರುದ್ಧವೇ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಶಾಸಕ ಅಮೃತ ದೇಸಾಯಿ ಎಚ್ಚರಿಕೆ ನೀಡಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ಪ್ರವೀಣ್ ಒಳ್ಳೆಯ ಕಾರ್ಯಕರ್ತನಾಗಿದ್ದ. ನಿನ್ನೆ ನಾಮಪತ್ರ ಸಲ್ಲಿಕೆ ವೇಳೆ ಆತ ಅತ್ಯಂತ ಹುರುಪಿನಿಂದ ಪಾಲ್ಗೊಂಡು ಜನರನ್ನು ಕರೆದುಕೊಂಡು ಬಂದಿದ್ದ. ಇಂದು ಬೆಳಗಿನಜಾವ 6 ಗಂಟೆ ಸುಮಾರಿಗೆ ಆತನ ಹತ್ಯೆ ಆದ ವಿಷಯ ಕೇಳಿ ಮನಸ್ಸಿಗೆ ಬಹಳ ಬೇಸರ ಆಯ್ತು. ನನ್ನ ಮನಸ್ಸು ಕೂಡ ಭಾರವಾಯ್ತು. ಪ್ರವೀಣ್ ಕಮ್ಮಾರನಿಗೆ ಇಂತಹ ಸಂದರ್ಭ ಬರುತ್ತದೆ ಎಂದು ನಾನು ಊಹಿಸಿರಲಿಲ್ಲ ಎಂದರು.
ಅಪಾರ ಯುವಕ ಬೆಂಬಲ ಹೊಂದಿದ್ದ ಪ್ರವೀಣ್ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಆ ಕುಟುಂಬ ಜೊತೆ ನಾನಿರುತ್ತೇನೆ. ಇದರಿಂದ ನಮ್ಮ ಕಾರ್ಯಕರ್ತರು ಹೆದರುವುದು ಬೇಡ. ನಿಮ್ಮೊಂದಿಗೆ ನಾನಿದ್ದೇನೆ. ಪ್ರವೀಣ್ ಕಮ್ಮಾರನ ಕುಟುಂಬಕ್ಕೆ ನಾನೂ ನೆರವಾಗುತ್ತೇನೆ ಎಂದರು.