ಬೆಂಗಳೂರು: ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ರೈತರ ನಿಯೋಗದೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ ನಡೆಸಿದರು. ರೈತರ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಿದರು, ರೈತರು ಎದುರಿಸುತ್ತಿರುವ ಸಂಕಷ್ಟಗಳ ಕುರಿತು ಸಮಾಲೋಚನೆ ನಡೆಸಿದರು.
ಸಭೆಯಲ್ಲಿ ಪ್ರಮುಖವಾಗಿ ವಿದ್ಯುತ್ ಸಮಸ್ಯೆಯೇ ಪ್ರಧಾನವಾಗಿ ಚರ್ಚೆಗೆ ಬಂತು, ಬಹುಪಾಲು ಬೆಳೆ ನಷ್ಟಕ್ಕೆ ವಿದ್ಯುತ್ ಕೈಕೊಡುವುದೇ ಕಾರಣ ಎಂದು ರೈತರ ನಿಯೋಗದ ಪ್ರತಿನಿಧಿಗಳು ಅವಲತ್ತುಕೊಂಡರು,
ನಿರಂತರ ವಿದ್ಯುತ್ ಪೂರೈಕೆಯಾದರೆ ಮಾತ್ರ ಬೆಳೆ ಕೈಗೆ ಸಿಗಲಿದೆ ಇಲ್ಲದಿದ್ದರೆ ನಷ್ಟಕ್ಕೊಳಗಾಗಬೇಕಾಗಲಿದೆ, ಇನ್ನು ಬೇಸಿಗೆ ಬೇರೆ ಬಂತು ವಿದ್ಯುತ್ ಕೊರತೆಯೂ ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ರೈತರ ಅಹವಾಲು ಆಲಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿದ್ಯುತ್ ಕೊರತೆ ಉಂಟಾದಲ್ಲಿ ಹೊರ ರಾಜ್ಯಗಳಿಂದ ಪೂರೈಕೆ ಮಾಡುವ ಕುರಿತು ಸಹ ಚಿಂತನೆ ಮಾಡಲಾಗುತ್ತದೆ. ಅಲ್ಲದೇ ರೈತರ ಪಂಪ್ ಸೆಟ್ಗಳಿಗೆ ನಿರಂತರ ಏಳು ತಾಸು 3 ಫೇಸ್ ವಿದ್ಯುತ್ ಪೂರೈಸುವ ಕುರಿತು ಅಧಿಕಾರಿಗಳಿಗೆ ಇಂದು ಸೂಚನೆ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.