ಉತ್ತರ ಕೊರಿಯಾದ ನಾಯಕ ಇಮ್ ಜಾಂಗ್ ಉನ್ ದೇಶದ ಪಶ್ಚಿಮ ಪ್ರದೇಶದಲ್ಲಿರುವ ಪ್ರಮುಖ ಮಿಲಿಟರಿ ಕಾರ್ಯಾಚರಣೆ ನೆಲೆಗೆ ಭೇಟಿ ಸೈನಿಕರಿಗೆ ಕೆಲವೊಂದು ಸೂಚನೆಗಳನ್ನು ನೀಡಿದ್ದಾರೆ. ಯುದ್ಧಕ್ಕೆ ಹೆಚ್ಚಿನ ಸಿದ್ಧತೆಗಳನ್ನು ಮಾಡಿಕೊಳ್ಳಿ ಎಂದು ಕೆಮ್ ಜಾಂಗ್ ಉನ್ ಹೇಳಿರುವುದಾಗಿ ಕೆಸಿಎನ್ಎ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಯುಎಸ್-ದಕ್ಷಿಣ ಕೊರಿಯಾದಲ್ಲಿ ಸೈನ್ಯಕ್ಕೆ ಸೇರುವವರ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ. ಯಾವುದೇ ಸಂಭವನೀಯತೆಗೆ ಮಿಲಿಟರಿ ಸಂಪೂರ್ಣವಾಗಿ ಸಿದ್ಧವಾಗಬೇಕಾದ ಮತ್ತು ಸೈನ್ಯವು “ಚಾಲ್ತಿಯಲ್ಲಿರುವ ಪರಿಸ್ಥಿತಿಯ ಅವಶ್ಯಕತೆಗಳಿಗೆ ಅನುಗುಣವಾಗಿ ಯುದ್ಧ ಸಿದ್ಧತೆಗಳನ್ನು ತೀವ್ರಗೊಳಿಸುವ ಹೊಸ ಉತ್ತುಂಗವನ್ನು ಕ್ರಿಯಾತ್ಮಕವಾಗಿ ಪ್ರಾರಂಭಿಸಬೇಕು” ಎಂದು ತಮ್ಮ ಭೇಟಿಯ ಸಮಯದಲ್ಲಿ ಕಿಮ್ ಹೇಳಿದ್ದಾರೆ.