ಬೆಂಗಳೂರು: ಕನ್ನಡ ಸಾಹಿತ್ಯ, ಉರ್ದು ಸಾಹಿತ್ಯ ಸೇರಿದಂತೆ ಭಾರತೀಯ ಭಾಷೆಗಳ ಸಾಹಿತ್ಯಗಳು ಹೆಚ್ಚು ಬೆಳಕು ಚೆಲ್ಲುವಂತಾಗಬೇಕು ಎಂದು ಬಿಬಿಎಂಪಿ ವಿಶೇಷ ಆಯುಕ್ತರು ಹಾಗೂ ಲೇಖಕರು ಆದ ಶ್ರೀ ಜಯರಾಮ್ ರಾಯಪುರ ರವರು ತಿಳಿಸಿದರು.
ಬಾಜ್ಮ್ ಇ ಗಲಿಹ್, ನಯಾ ಅದಬ್ ಹಾಗೂ ಕರ್ನಾಟಕ ಉರ್ದು ಅಕಾಡೆಮಿಯ ಸಹಯೋಗದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಡೆಯುತ್ತಿರುವ ಭಾರತೀಯ ಸಂಪ್ರದಾಯ ಮತ್ತು ಸೂಫಿಸಂ ಜೀವನ ಮತ್ತು ಹಜರತ್ ಅಮೀರ್ ಖುಸ್ರೋ ಅವರ ಕೆಲಸಗಳ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ದಲ್ಲಿ ನಾಡಫ್ರಭು ಕೆಂಪೇಗೌಡರ ಜೀವನಾಧಾರಿತ “ಸಿರಿಗೆ ಸೆರೆ” ಕನ್ನಡ ಭಾಷೆಯಿಂದ ಉರ್ದು ಭಾಷೆಗೆ ಭಾಷಾಂತರಿಸಿರುವ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದ ಬಳಿಕ ಅವರು ಮಾತನಾಡಿದರು.
ಬೆಂಗಳೂರನ್ನು ಕಟ್ಟಿ ಆಳಿದ ಕೆಂಪೇಗೌಡರ ಆಡಳಿತದ ಕೊನೆ ಅವಧಿಯ ಘಟನೆಗಳನ್ನಾಧರಿಸಿದ ನಾಟಕ ಇದಾಗಿದ್ದು, ಸಿರಿಗೆ ಸೆರೆ ನಾಟಕ ಪುಸ್ತಕವನ್ನು ಕನ್ನಡದಲ್ಲಿ 2015ರಲ್ಲಿ ಅನಾವರಣಗೊಳಿಸಲಾಯಿತು. ಆ ಬಳಿಕ ಹಿಂದಿ ಭಾಷೆಯಲ್ಲಿ ಭಾಷಾಂತರ ಮಾಡಲಾಯಿತು. ಇದೀಗ ಉರ್ದು ಭಾಷೆಗೆ ಭಾಷಾಂತರಿಸಿ ಇಂದು ಲೋಕಾರ್ಪಣೆಗೊಳಿಸಲಾಗಿದೆ ಎಂದು ಹೇಳಿದರು.
ಕರ್ನಾಟಕದ ಇತಿಹಾಸದಲ್ಲಿ ಕಡಿಮೆ ಸಂಖ್ಯೆಯಲ್ಲಿ ಇತಿಹಾಸದ ಮೇಲೆ ಪ್ರಭಾವವನ್ನು ಬಿಟ್ಟುಹೋಗಿದ್ದಾರೆ. ಅವರಲ್ಲಿ ನಾಡಪ್ರಭು ಕೆಂಪೇಗೌಡರು ಕೂಡಾ ಒಬ್ಬರು. ಸಣ್ಣ ಪರಿವಾರದಿಂದ ಬಂದಂತಹವರು ಒಂದು ನಾಡನ್ನು ಕಟ್ಟಿದಂತಹವರು. ವಿಜಯನಗರದ ಅರಸರಿಂದ ಕೆಂಪೇಗೌಡರ ನಡುವೆ ನಡೆಯುವ ಘಟನೆಗಳ ಕುರಿತು ಬರೆದ ನಾಟಕ ಇದಾಗಿದೆ ಎಂದು ತಿಳಿಸಿದರು. ಕರ್ನಾಟಕದಲ್ಲಿ ಉರ್ದು ಬರಹಗಾರರು ಸಾಕಷ್ಟಿದ್ದಾರೆ. ಉರ್ದು ಭಾಷೆಯಲ್ಲಿ ಬರೆಯುವಂತ ಹಾಗೂ ಓದುವ ಸಂಖ್ಯೆ ಇನ್ನೂ ಹೆಚ್ಚಾಗಬೇಕು. ಅಲ್ಲದೆ ಉರ್ದು ಭಾಷೆಯಲ್ಲಿ ಶ್ರೀಮಂತ ಸಾಹಿತ್ಯ ಹೊರಬರುವ ಜೊತೆಗೆ ಹೆಚ್ಚು-ಹೆಚ್ಚು ವಿಚಾರ ಸಂಕಿರಣಗಳಾಬೇಕು ಎಂದರು.
ಈ ವೇಳೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯಾದ ಮನೋಜ್ ಜೈನ್, ಕರ್ನಾಟಕ ಉರ್ದು ಅಕಾಡೆಮಿಯ ರಿಜಿಸ್ಟರ್ ಆದ ಡಾ. ಮಾಜುದ್ದಿನ್ ಖಾನ್, ಲೇಕಖರಾದ ಡಾ. ಅಜಯ್ ಕುಮಾರ್ ಸಿಂಗ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.