ಭಾರತೀಯ ಅಮೆರಿಕನ್ ನಟಿ, ನಿರ್ಮಾಪಕಿ ಮೈಂಡಿ ಕಲಿಂಗ್ ಅವರಿಗೆ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ರಾಷ್ಟ್ರೀಯ ಮಾನವೀಯತೆ ಪದಕ ನೀಡಿ ಬೆನ್ನು ತಟ್ಟಿದ್ದಾರೆ.
ಇದು ಸರ್ಕಾರದಿಂದ ಕಲಾವಿದರು, ಕಲಾ ಪೋಷಕರು ಮತ್ತು ಗುಂಪುಗಳಿಗೆ ನೀಡುವ ಅತ್ಯುನ್ನತ ಪ್ರಶಸ್ತಿಯಾಗಿದೆ.
ಅಮೆರಿಕಾದಲ್ಲಿ ಕಲೆ ಅಭಿವೃದ್ಧಿಗೆ ಶ್ರಮ, ವಿಶಿಷ್ಟ ಸಾಧನೆ, ಇತರರಿಗೆ ಸ್ಫೂರ್ತಿ ನೀಡಿದ ಅನುಕರಣೀಯ ಕಾರ್ಯಗಳನ್ನು ಗುರುತಿಸಿ ಕಲಾವಿದರು, ವ್ಯಕ್ತಿಗಳು ಹಾಗೂ ಸಂಸ್ಥೆಗಳಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಹೊಸ ಪೀಳಿಗೆಯ ಕಥೆಗಾರರಿಗೆ ಬೆಂಬಲ ನೀಡುತ್ತಿರುವುದನ್ನು ಗುರುತಿಸಿ ಮೈಂಡಿ ಕಲಿಂಗ್ ಅವರಿಗೆ ಶ್ವೇತ ಭವನದಲ್ಲಿ ಈ ಗೌರವ ನೀಡಲಾಗಿದೆ.