ಬೆಂಗಳೂರು: ಬೆಂಗಳೂರು- ಮೈಸೂರು ಎಕ್ಸ್’ಪ್ರೆಸ್ ಹೈವೆ ಯಲ್ಲಿ ಸಂಭವಿಸುತ್ತಿರುವ ಅಪಘಾತಗಳ ಹಿನ್ನಲೆಯಲ್ಲಿ ರಸ್ತೆ ನಿರ್ಮಾಣ ದಲ್ಲಿರಬಹುದಾದ ಲೋಪ ಪರಿಶೀಲನೆಗೆ ಉನ್ನತ ಮಟ್ಟದ ತಜ್ಞರ ಸಮಿತಿ ಯನ್ನು ರಚಿಸಲು ಮುಖ್ಯಮಂತ್ರಿಗಳಿಗೆ ಒತ್ತಾಯಿಸಲು
ಇಂದು ವಿಧಾನಸೌಧದಲ್ಲಿ ಕೃಷಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಚೆಲುವರಾಯಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಮಂಡ್ಯ ಜಿಲ್ಲಾ ಸಂಸದರು ಮತ್ತು ಶಾಸಕರ ಸಮ್ಮುಖದಲ್ಲಿ NHI ಮತ್ತು PWD ಉನ್ನತ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ್ದರು. ಬೆಂಗಳೂರು ಮೈಸೂರು ರಸ್ತೆಯಲ್ಲಿ ಅಪಘಾತಗಳು ಪ್ರತಿದಿನ ವರದಿಯಾಗುತ್ತಿರುವ ಬಗ್ಗೆ ಸಚಿವರು ಆತಂಕ ವ್ಯಕ್ತಪಡಿಸಿದ್ದು ಅವೈಜ್ಞಾನಿಕ ವಾಗಿ ರಸ್ತೆ ನಿರ್ಮಿಸಿರುವುದಕ್ಕೆ ಸಚಿವರು,ಸಂಸದರು,ಶಾಸಕರಿಂದ ಅಸಮಾಧಾನ ವ್ಯಕ್ತವಾಯಿತು. ಅವೈಜ್ಞಾನಿಕ ಬೈಪಾಸ್ ರಸ್ತೆ ನಿರ್ಮಿಸಿರುವುದು,ಲೈಟ್ ವ್ಯವಸ್ಥೆ ಇರುವುದಿಲ್ಲ, ಸಂಪರ್ಕ ರಸ್ತೆ ಅಭಿವೃದ್ಧಿ ಸಮರ್ಪಕವಾಗಿರದಿರುವುದು, ಗ್ರಾಮೀಣ ವ್ಯಾಪ್ತಿಯಲ್ಲಿ ವಿದ್ಯುತ್ ದೀಪಗಳ ಸೌಲಭ್ಯ ವಿಲ್ಲ.
ದರೋಡೆ ಪ್ರಕರಣಗಳು ವರದಿಯಾಗುತ್ತಿವೆ. ರಸ್ತೆಯಲ್ಲಿ ಜನರು ಓಡಾಡಲು ಭಯಪಡುವಂತ ಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಮಧ್ಯೆ ನಿರ್ಮಿಸಿರುವ ಡಿವೈಡರ್ ಕೇವಲ 225.ಸೆ.ಮಿ ಇದೆ ಇದನ್ನು ಕನಿಷ್ಟ 4 ಅಡಿ ಇದಿದ್ದರೆ ಎಷ್ಟೊ ಅಪಘಾತಗಳು ತಪ್ಪುತಿತ್ತು. ಮಳೆ ನೀರು ನಿಲ್ಲದಂತೆ ಕ್ರಮ ಕೈಗೊಂಡಿಲ್ಲ ಮತ್ತು ರಸ್ತೆಯಲ್ಲಿ ಮರಳು ಸಂಗ್ರಹವಾಗುವುದು ತಕ್ಷಣ ಸರಿಪಡಿಸಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ರಸ್ತೆ ಪಕ್ಕದಲ್ಲಿರುವ ವಿದ್ಯುತ್ ಪರಿವರ್ತಕಗಳ ಸ್ಥಳಾಂತರ, ಆಗಮನ, ನಿರ್ಗಮನ ಮಾರ್ಗಗಳು ಅವೈಜ್ಞಾನಿಕ ವಾಗಿರುವುದು. ಟೋಲ್ ನಲ್ಲಿ ಗಣ್ಯರಿಗೆ, ಅಂಬ್ಯೂಲೆಸ್ಸ್ ತುರ್ತು ಸಂಚಾರಕ್ಕೆ ಪ್ರತ್ಯಕ ಮಾರ್ಗ ನಿರ್ಮಿಸಬೇಕೆಂದರು. ಸಾರ್ವಜನಿಕ ಹಿತದೃಷ್ಟಿಯಿಂದ ಎಲ್ಲಾ ಲೋಪಗಳನ್ನು ಕಾಲಮಿತಿಯೊಳಗೆ ಸರಿಪಡಿಸಬೇಕೆಂದು ಅಧಿಕಾರಿಗಳಿಗೆ ಸಚಿವರಾದ ಚೆಲುವರಾಯಸ್ವಾಮಿ ಅವರು ತಾಕೀತು ಮಾಡಿದರು.
ಸಂಸದರು,ಶಾಸಕರ ಮತ್ತು NHI ಸಂಸ್ಥೆಯ ಉನ್ನತ ಅಧಿಕಾರಿಗಳು,PWD ಕಾರ್ಯದರ್ಶಿಗಳನ್ನೊಳಗೊಂಡ ತಜ್ಞರ ಸಮಿತಿ ರಚಿಸಲು ಮುಖ್ಯಮಂತ್ರಿ ಗಳನ್ನು ಒತ್ತಾಯಿಸಲು ಸಭೆಯಲ್ಲಿ ನಿರ್ಧರಿಸಲಾಗಿದ್ದು, ಸಮಿತಿಯು ಶೀಘ್ರದಲ್ಲಿ ಅಪಘಾತ ನಡೆಯುವ ಸ್ಥಳಗಳು ಮತ್ತು ಎಂಟ್ರಿ ಮತ್ತು ಎಕ್ಸಿಟ್ ಸ್ಥಳಗಳನ್ನು ನಿರ್ಮಾಣ ಸಮಸ್ಯೆಗಳನ್ನು ಪರಿಶೀಲಿಸಿ ಕಾಲಮಿತಿಯಲ್ಲಿ ವರದಿ ನೀಡಲು ತೀರ್ಮಾನಿಸಲಾಯಿತು.
ಈ ವರದಿಯನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ಮತ್ತು ಲೋಕೋಪಯೋಗಿ ಸಚಿವರಿಗೆ ಮನವಿ ಸಲ್ಲಿಸಲಾಗುವುದು.ಮತ್ತು ಭಾರತೀಯ ಹೆದ್ದಾರಿ ಪ್ರಾಧಿಕಾರದ ಮಂತ್ರಿಗಳ ಜೊತೆ ಮಾತನಾಡಿ ಸರಿಪಡಿಸುವಂತೆ ಮನವಿ ಮಾಡಲಾಗುವುದು. ಸಭೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ , ಶಾಸಕರಾದ ನರೇಂದ್ರ ಸ್ವಾಮಿ, ರಮೇಶ್ ಬಾಬು ಬಂಡಿಸಿದ್ದೇಗೌಡ,ಗಣಿಗ ರವಿಕುಮಾರ್, ಉದಯ್,ದಿನೇಶ್ ಗೂಳಿಗೌಡ,ಮಧು ಜಿ ಮಾದೇಗೌಡ ಮತ್ತು ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.