ಬೆಂಗಳೂರು:- ಪ್ರಧಾನಿ ಮೋದಿಗೆ ಮಾಂಗಲ್ಯದ ಬೆಲೆಯೇ ಗೊತ್ತಿಲ್ಲ ಎಂದು ಪ್ರಿಯಾಂಕ ಗಾಂಧಿ ವಾದ್ರಾ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾಂಗಲ್ಯ ಕಿತ್ತುಕೊಳ್ಳಲಿದೆ ಅಂತಿದ್ದಾರೆ. ನನ್ನ ತಾಯಿ ದೇಶಕ್ಕಾಗಿ ಮಾಂಗಲ್ಯವನ್ನೇ ತ್ಯಾಗಮಾಡಿದ್ದಾರೆ ಎಂದರು.
ಬಿಜೆಪಿಯವರು ಯಾವುದೇ ಅಭಿವೃದ್ಧಿ ಕಾರ್ಯದ ಬಗ್ಗೆ ಮಾತನಾಡಲ್ಲ. ಬಿಜೆಪಿಯವರು ನರೇಂದ್ರ ಮೋದಿ ಇಟ್ಟುಕೊಂಡು ಮತ ಕೇಳುತ್ತಿದ್ದಾರೆ. ಬಿಜೆಪಿ ಭಾವನಾತ್ಮಕ ವಿಚಾರ ಮುಂದಿಟ್ಟು ರಾಜಕೀಯ ಮಾಡ್ತಿದ್ದಾರೆ. ಅವರಿಗೆ ಮಹಿಳೆಯರ ಕಷ್ಟ ಅರ್ಥವಾಗಲ್ಲ. ರೈತರು ಸಾಲ ಹೆಚ್ಚಾದಾಗ ಮಹಿಳೆಯರು ಮಾಂಗಲ್ಯ ಅಡವಿಡುತ್ತಾರೆ. ಮನೆಯಲ್ಲಿ ಯಾರಿಗಾದರೂ ಕಷ್ಟ ಬಂದರೆ ಮಾಂಗಲ್ಯ ಅಡವಿಡುತ್ತಾರೆ. ಅದರ ಬೆಲೆ ಅವರಿಗೆ ಗೊತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ರೈತರ ವಿರೋಧಿ ಕೃಷಿ ಕಾಯ್ದೆ ವಿರುದ್ಧ ವರ್ಷಾನುಗಟ್ಟಲೆ ಹೋರಾಟ ಮಾಡಿದ್ದಾರೆ. ದೆಹಲಿ ಗಡಿಯಲ್ಲಿ ಹೋರಾಟ ಮಾಡುತ್ತಿದ್ದ 609 ರೈತರು ಮೃತಪಟ್ಟರು. ಆಗ ಪ್ರಧಾನಿ ಮೋದಿಗೆ ಮಾಂಗಲ್ಯ ನೆನಪಾಗಲಿಲ್ವಾ? ಮಣಿಪುರದಲ್ಲಿ ಹೆಣ್ಣನ್ನು ಬೆತ್ತಲೆಮಾಡಿ ಮೆರವಣಿಗೆ ಮಾಡಿದ್ದರು ಆ ಸಂದರ್ಭದಲ್ಲಿ ಮೋದಿ ಎಲ್ಲಿದ್ರು? ಬಾಯಿಬಿಡಲಿಲ್ವಲ್ಲಾ? ದೇಶದ ಬಗ್ಗೆ ಕಿಂಚಿಂತೂ ಕಾಳಜಿಯಿಲ್ಲದ ಮೋದಿಗೆ ನಾಚಿಕೆ ಆಗ್ಬೇಕು. ನಿಮಗೆ ಪರೋಪಕಾರ ಬೇಕಾ? ಅಹಂಕಾರ ಬೇಕಾ? ಸುಳ್ಳು ಹೇಳುವವರು ಬೇಕಾ? ಸತ್ಯ ಹೇಳುವವರು ಬೇಕಾ? ನೈಜತೆ ಬೇಕಾ ನಾಟಕೀಯತೆ ಬೇಕಾ ನೀವೇ ತೀರ್ಮಾನ ಮಾಡಿ. ಬಿಜೆಪಿಯವರು ಕೇವಲ ಹಿಂದೂ, ಮುಸ್ಲಿಂ ಎಂದು ಕಿತ್ತಾಟ ತಂದಿಡ್ತಾರೆ ಎಂದು ಹಿರಿಹಾಯ್ದಿದ್ದಾರೆ.
ದೇಶದಲ್ಲಿ ಇಂದು ಯಾವ ಪರಿಸ್ಥಿತಿ ಇದೆ ಎಂದು ನಿಮಗೆ ಗೊತ್ತು. ಬಹುದೊಡ್ಡ ಸಮಸ್ಯೆ ನಿರುದ್ಯೋಗ ಹಾಗೂ ಬೆಲೆ ಏರಿಕೆ. ಬೆಲೆ ಏರಿಕೆ ಆದಾಗ ಮಹಿಳೆಯರ ಮೇಲೆ ಕಷ್ಟ ಬೀಳುತ್ತೆ. ಡೀಸೆಲ್, ಪೆಟ್ರೋಲ್, ಗ್ಯಾಸ್ ಸಿಲಿಂಡರ್ ದರ ಹೆಚ್ಚಾಗಿದೆ. ಮೋದಿ 10 ವರ್ಷದ ಆಡಳಿತದಲ್ಲಿ ನಿಮಗೇನು ಸಿಕ್ಕಿದೆ. ನಿತ್ಯ ಟಿವಿಯಲ್ಲಿ ಸೂಪರ್ಮ್ಯಾನ್ ಇಮೇಜ್ ತೋರಿಸ್ತಾರೆ. ಮೋದಿ ಸೂಪರ್ಮ್ಯಾನ್ ಅಲ್ಲ, ಬೆಲೆ ಏರಿಕೆ ಮ್ಯಾನ್. ನಿಮ್ಮ ಜೀವನದಲ್ಲಿ ಯಾವುದೇ ಬದಲಾವಣೆಯೇ ಆಗಿಲ್ಲ ಎಂದು ಹೇಳಿದ್ದಾರೆ