ನವದೆಹಲಿ: ಇಂದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು 74ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಮ್ಮ ನಾಯಕನ ಜನ್ಮದಿನವನ್ನು ವಿಭಿನ್ನವಾಗಿ ಆಚ ರಿಸಲು ಬಿಜೆಪಿ ಒಂದೆಡೆ ಭರ್ಜರಿ ಸಿದ್ಧತೆ ಮಾಡಿ ಕೊಂಡಿದ್ದರೆ, ಮತ್ತೊಂದೆಡೆಮೋದಿ ಅಭಿಮಾನಿಗಳು ವಿಶಿಷ್ಟವಾಗಿ ಹುಟ್ಟುಹಬ್ಬವನ್ನು ಆಚರಿಸಲಿದ್ದಾರೆ.
ಹುಟ್ಟುಹಬ್ಬದ ಹಿನ್ನಲೆಯಲ್ಲಿ ಅಜೈರ್ ಪರೀಫ್ ದರ್ಗಾವು 4 ಸಾವಿರ ಕೆಜಿಯಸಸ್ಯಾಹಾರಿಲಂಗೇರ್ ಆಹಾರ ವಿತರಿಸಲು ಮುಂದಾಗಿದೆ. ಚೆನ್ನೈ ಮೂಲದ 13 ವರ್ಷದ ಬಾಲಕಿ ಮೋದಿ ಚಿತ್ರವನ್ನು 800 ಕೆ.ಜಿ ಸಿರಿಧಾನ್ಯ ಬಳಸಿ ತಯಾರಿಸಿದ್ದಾಳೆ. ತವರುರಾಜ್ಯ ಗುಜರಾತಿನ ಸೂರತ್ನಲ್ಲಿ ಪ್ರಧಾನಿ ಜನ್ಮದಿನದಂದು ವ್ಯಾಪಾರಿಗಳು ರಿಯಾಯಿತಿ ದರದಲ್ಲಿ ವಸ್ತುಗಳ ಮಾರಾಟಕ್ಕೆ ಮುಂದಾಗಿದ್ದಾರೆ.
ಗಾಂಧಿನಗರದಲ್ಲಿ 4ನೇ ಆವೃತ್ತಿಯ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಮಾವೇಶ ಹಾಗೂ ಎಕ್ಸ್ ಪೋದಲ್ಲಿ ಸೋಮವಾರ ಪ್ರಧಾನಿ ಮೋದಿಗೆ ಸಚಿವ ಪ್ರಹ್ಲಾದ ಜೋಶಿ ಅವರಿಂದ ಸನ್ಮಾನ. ಮತ್ತೊಂದೆಡೆ ದೇಶದಲ್ಲಿ ಎನ್ಡಿಎ ಸರ್ಕಾರ ಸೆ.15ಕ್ಕೆ ಅಧಿಕಾರಕ್ಕೆ ಬಂದು 100 ದಿನಗಳು ಸಂದಿದೆ. ಹೀಗಾಗಿ ಮೋದಿ ಹುಟ್ಟುಹಬ್ಬದ ದಿನ ಬಿಜೆಪಿ ನಾಯಕರು 100 ದಿನದ ಸಾಧನೆ ವಿವರಿಸಲಿದ್ದಾರೆ.
ಪ್ರಧಾನಿ ಮೋದಿಯವರ 74ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಇತರ ಬಿಜೆಪಿ ನಾಯಕರು ಮತ್ತು ವಿರೋಧ ಪಕ್ಷಗಳಿಗೆ ಎನ್ಡಿಎ ಮೈತ್ರಿಕೂಟದ ಇತರ ಪಕ್ಷಗಳು ಪ್ರಧಾನಿ ಮೋದಿಯವರಿಗೆ ಶುಭ ಹಾರೈಸಿದವು. ಪ್ರತಿ ವರ್ಷದಂತೆ ಬಿಜೆಪಿಯು ಮಂಗಳವಾರ ಪ್ರಧಾನಿ ಮೋದಿಯವರ ಜನ್ಮದಿನದ ಅಂಗವಾಗಿ ಸೇವಾ ಪಖ್ವಾರ ಅಥವಾ ಸೇವಾ ಪರ್ವ್ ಅನ್ನು ಪ್ರಾರಂಭಿಸಲು ಸಜ್ಜಾಗಿದೆ.
ತಮ್ಮ 74 ನೇ ಹುಟ್ಟುಹಬ್ಬದಂದು, ಪ್ರಧಾನಿ ನರೇಂದ್ರ ಮೋದಿ ಅವರು ಭುವನೇಶ್ವರದ ಗಡಕಾನಾದಲ್ಲಿ 26 ಲಕ್ಷ ಪಿಎಂ ಆವಾಸ್ ಯೋಜನೆ ಮನೆಗಳನ್ನು ಉದ್ಘಾಟಿಸಲಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ನನ್ನ ಜನ್ಮದಿನದ ಶುಭಾಶಯಗಳು. ನಾನು ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಬಯಸುತ್ತೇನೆ ಎಂದು ಹೇಳಿದ್ದಾರೆ.