ಬೆಂಗಳೂರು: ರಾಮ ಮಂದಿರ ಉದ್ಘಾಟನೆಗೂ ಮುನ್ನವೇ ಪ್ರಧಾನಿ ಮೋದಿ ಕರ್ನಾಟಕಕ್ಕೆ ಬರ್ತಿದ್ದಾರೆ, BIETCಗೆ ಬರ್ತಿರೋ ನಮೋ ಚಾಮರಾಜನಗರಕ್ಕೂ ಭೇಟಿ ನೀಡುವ ಸಾಧ್ಯತೆ ಇದೆ. ರಾಜ್ಯ ಬಿಜೆಪಿ ನಾಯಕರಲ್ಲಿ ಲೋಕಸಭಾ ರಣೋತ್ಸಾಹ ಬಂದಿದ್ದು ಹೊಸ ಹುರುಪಿನಲ್ಲಿದ್ದಾರೆ, ಬೆಂಗಳೂರಿನಲ್ಲಿ ನಮೋ ಬೃಹತ್ ರೋಡ್ ಶೋಗೆ ಕೇಸರಿ ನಾಯಕರು ಪ್ಲಾನ್ ಮಾಡ್ತಿದ್ದು ಲೋಕಸಮರಕ್ಕೆ ರಣಕಹಳೆ ಮೊಳಗಿಸಲು ಸಜ್ಜಾಗ್ತಿದ್ದಾರೆ ಕಮಲನಾಯಕರು.
ಜನವರಿ 19 ರಂದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಇಲ್ಲಿದೆ ಅವರ ವೇಳಾಪಟ್ಟಿ ವಿವರ!
ಬೆಳಗ್ಗೆ 9.35ಕ್ಕೆ ದೆಹಲಿಯಿಂದ ಕಲ್ಬುರ್ಗಿ ಏರ್ ಪೋರ್ಟ್ ಗೆ ಆಗಮನ
9.40 ಕ್ಕೆ ಕಲ್ಬುರ್ಗಿಯಿಂದ ಹೆಲಿಕಾಫ್ಟರ್ ಮೂಲಕ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ಪ್ರಯಾಣ
ಮಧ್ಯಾಹ್ನ 12.10ಕ್ಕೆ ಹೆಲಿಕಾಫ್ಟರ್ ಮೂಲಕ ಸೊಲ್ಲಾಪುರದಿಂದ ನಿರ್ಗಮನ
ಮಧ್ಯಾಹ್ನ 1 ಗಂಟೆಗೆ ಕಲ್ಬುರ್ಗಿ ಏರ್ ಪೋರ್ಟ್ ಗೆ ಆಗಮನ
1.05 ಕ್ಕೆ ವಿಶೇಷ ವಿಮಾನದ ಮೂಲಕ ಕಲ್ಬುರ್ಗಿಯಿಂದ ಬೆಂಗಳೂರಿಗೆ ಪ್ರಯಾಣ
ಮಧ್ಯಾಹ್ನ 2.10 ಕ್ಕೆ ಬೆಂಗಳೂರು ಕೆಂಪೇಗೌಡ ಏರ್ ಪೋರ್ಟ್ ಗೆ ಆಗಮನ
2.15 ಕ್ಕೆ ಕೆಐಎಎಲ್ ನಿಂದ ರಸ್ತೆ ಮಾರ್ಗವಾಗಿ ದೇವನಹಳ್ಳಿ ತಾಲೂಕಿನ ಭಟ್ಟರ ಮಾರನಹಳ್ಳಿಗೆ ಪ್ರಯಾಣ
2.45 ಕ್ಕೆ ಭಟ್ಟರಮಾರನಹಳ್ಳಿಗೆ ತಲುಪಲಿರುವ ಮೋದಿ
ಬಿಐಇಟಿಸಿ ಉದ್ಘಾಟನೆ ಮತ್ತು ಬೋಯಿಂಗ್ ಸುಕನ್ಯಾ ಕಾರ್ಯಕ್ರಮ ಲೋಕಾರ್ಪಣೆ
ಮಧ್ಯಾಹ್ನ 3.45 ಕ್ಕೆ ಭಟ್ಟರ ಮಾರನಹಳ್ಳಿಯಿಂದ ನಿರ್ಗಮನ
3.55 ಕ್ಕೆ ಕೆಐಎಎಲ್ ತಲುಪಲಿರುವ ಪ್ರಧಾನಿ
ಸಂಜೆ 4 ಗಂಟೆಗೆ ಕೆಐಎಎಲ್ ನಿಂದ ಚೆನ್ನೈಗೆ ನಿರ್ಗಮನ.