ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ವಿಶ್ವದ ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ. ‘ಮಾರ್ನಿಂಗ್ ಕನ್ಸಲ್ಟ್’ ಸರ್ವೇಕ್ಷಣಾ ಸಂಸ್ಥೆ ನಡೆಸುವ ಸರ್ವೆಯಲ್ಲಿ ಈ ಫಲಿತಾಂಶ ಲಭ್ಯವಾಗಿದ್ದು, ಮೋದಿ ಪರ ಜಾಗತಿಕವಾಗಿ ಶೇ. 78ರಷ್ಟು ‘ಅನುಮೋದನೆ ಸೂಚ್ಯಂಕ’ ಸಿಕ್ಕಿದೆ.
ಜನವರಿ 30 ರಿಂದ ಫೆಬ್ರವರಿ 5ರವರೆಗೆ ವಿಶ್ವಾದ್ಯಂತ ಸರ್ವೇಕ್ಷಣಾ ಕಾರ್ಯ ನಡೆಸಿ ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆಯು ಈ ಅಂಕಿ ಅಂಶ ಕಲೆ ಹಾಕಿದೆ. 7 ದಿನಗಳ ಕಾಲ ವಿವಿಧ ದೇಶಗಳ ವಯಸ್ಕ ಮತದಾರರ ಅಭಿಪ್ರಾಯಗಳನ್ನು ಆಲಿಸಿ ಅದರ ಸರಾಸರಿಯನ್ನು ಪ್ರಕಟ ಮಾಡಿರೋದಾಗಿ ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ.
ಎರಡನೇ ಸ್ಥಾನದಲ್ಲಿ ಮೆಕ್ಸಿಕೋ ಅಧ್ಯಕ್ಷ ಆಂಡ್ರೆಸ್ ಮ್ಯಾನ್ಯುಲ್ ಲೋಪಜ್ ಆರ್ಬ್ರೇಡರ್ ಇದ್ದು ಅವರಿಗೆ ಜಾಗತಿಕವಾಗಿ ಶೇ. 64ರಷ್ಟು ಮತಗಳು ಲಭ್ಯವಾಗಿವೆ. ಇನ್ನು ಸ್ವಿಟ್ಜರ್ಲೆಂಡ್ನ ಅಲೈನ್ ಬೆರ್ಸತ್ ಅವರು ಮೂರನೇ ಸ್ಥಾನದಲ್ಲಿದ್ದು ಅವರಿಗೆ ಜಾಗತಿಕವಾಗಿ ಶೇ. 57 ರಷ್ಟು ಅನುಮೋದನಾ ಸೂಚ್ಯಂಕಗಳು ಲಭ್ಯ ಆಗಿವೆ.