ರಾಕಿಂಗ್ ಸ್ಟಾರ್ ಯಶ್ ನಟನೆಯ ಸೂಪರ್ ಹಿಟ್ ಕಿರಾತಕ ಸಿನಿಮಾದಲ್ಲಿ ನಟಿಸಿದ್ದ ನಟಿ ಇವಿಯಾ ಕಳೆದ ಕೆಲ ದಿನಗಳಿಂದ ಸಖತ್ ಸುದ್ದಿಯಲ್ಲಿದ್ದಾರೆ. ನಟಿ ಒವಿಯಾರದ್ದು ಎನ್ನಲಾದ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೋಡಿಯೊಂದು ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ವಿಡಿಯೋ ಅದಾಗಿದ್ದು, ವಿಡಿಯೋದಲ್ಲಿರುವ ಯುವತಿ ನಟಿ ಒವಿಯಾ ಎನ್ನಲಾಗುತ್ತಿದೆ. ಒವಿಯಾ ಬಲಗೈ ಭುಜದ ಮೇಲಿರುವ ಟ್ಯಾಟೂ, ವಿಡಿಯೋದಲ್ಲಿರುವ ಯುವತಿಯ ಭುಜದ ಮೇಲೆಯೂ ಇದ್ದು, ನೆಟ್ಟಿಗರು, ‘ಇದು ಒವಿಯಾರದ್ದೇ ವಿಡಿಯೋ’ ಎನ್ನುತ್ತಿದ್ದಾರೆ. ಇದೀಗ ವೈರಲ್ ವಿಡಿಯೋ ಬಗ್ಗೆ ನಟಿ ಒವಿಯಾ ಪೊಲೀಸರಿಗೆ ದೂರು ನೀಡಿದ್ದಾರೆ.
ಕೇರಳದ ತ್ರಿಶೂರ್ ಪೊಲೀಸ್ ಠಾಣೆಯಲ್ಲಿ ನಟಿ ಒವಿಯಾ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಒವಿಯಾರ ಮ್ಯಾನೇಜರ್, ‘ಒವಿಯಾರ ಘನತೆಗೆ ಧಕ್ಕೆ ತರುವ ಪ್ರಯತ್ನ ಇದಾಗಿದ್ದು, ಉದ್ದೇಶಪೂರ್ವಕವಾಗಿ ನಕಲಿ ವಿಡಿಯೋ ಅನ್ನು ಒವಿಯಾ ಹೆಸರಿನಲ್ಲಿ ವೈರಲ್ ಮಾಡಲಾಗಿದೆ’ ಎಂದಿದ್ದಾರೆ. ಈ ಬಗ್ಗೆ ತ್ರಿಶೂರು ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ ಎಂದಿದ್ದಾರೆ.
ವಿಡಿಯೋ ವೈರಲ್ ಆದ ಬಳಿಕ ಇನ್ಸ್ಟಾಗ್ರಾಂನಲ್ಲಿ ತಮ್ಮ ಸೆಲ್ಫಿಯೊಂದನ್ನು ಒವಿಯಾ ಹಂಚಿಕೊಂಡಿದ್ದರು. ‘ಪೂರ್ತಿ ವಿಡಿಯೋ ಹಾಕಿ’, ‘ವಿಡಿಯೋ ಬ್ಲರ್ ಇದೆ’ ಎಂದೆಲ್ಲ ಕಾಮೆಂಟ್ ಮಾಡಿದ್ದರು. ಕಮೆಂಟ್ ಮಾಡಿದ ಕೆಲವರಿಗೆ ತಮಾಷೆಯಾಗಿ ಉತ್ತರಿಸಿದ್ದ ಒವಿಯಾ, ‘ಮುಂದಿನ ಸಾರಿ ಹಾಕುತ್ತೇನೆ’, ‘ವಿಡಿಯೋ ಎಂಜಾಯ್ ಮಾಡಿ’ ಎಂದೆಲ್ಲ ಹೇಳಿದ್ದರು. ಒವಿಯಾರ ಈ ಕಮೆಂಟ್ಗಳು ಅದು ಒವಿಯಾರದ್ದೇ ವಿಡಿಯೋ ಇರಬಹುದಾ ಎಂಬ ಅನುಮಾನವನ್ನು ಇನ್ನಷ್ಟು ಬಲಗೊಳ್ಳುವಂತೆ ಮಾಡಿತ್ತು.
ಕೆಲವು ವರದಿಗಳ ಪ್ರಕಾರ, ಒವಿಯಾರ ಮಾಜಿ ಬಾಯ್ಫ್ರೆಂಡ್ ಒಬ್ಬಾತ ಅವರ ಖಾಸಗಿ ವಿಡಿಯೋವನ್ನು ಲೀಕ್ ಮಾಡಿದ್ದಾನೆ ಎನ್ನಲಾಗುತ್ತಿದೆ. ಇದೀಗ ಒವಿಯಾ, ತಮ್ಮ ಮಾಜಿ ಬಾಯ್ಫ್ರೆಂಡ್ ವಿರುದ್ಧವೇ ದೂರು ನೀಡಿದ್ದಾರೆ ಎನ್ನಲಾಗುತ್ತಿದೆ.
ಕಳೆದ ವರ್ಷ ತೆಲುಗಿನ ಯೂಟ್ಯೂಬರ್ ಒಬ್ಬಾತ, ಒವಿಯಾರ ಬಗ್ಗೆ ಕೀಳಾಗಿ ಕಮೆಂಟ್ ಮಾಡಿದ್ದ, ಹೈದರಾಬಾದ್ನ ಹಲವು ಹೋಟೆಲ್ ರೂಂಗಳಲ್ಲಿ ಒವಿಯಾ ತಂಗಿದ್ದಾಳೆ ಎಂದಿದ್ದ. ಆ ಯೂಟ್ಯೂಬರ್ ವಿರುದ್ಧ ಒವಿಯಾ ಆಗ ಕಿಡಿ ಕಾರಿದ್ದರು. ದೂರು ಸಹ ದಾಖಲಿಸಿದ್ದರು. ಆ ಯೂಟ್ಯೂಬರ್ ನಟಿ ಸಮಂತಾ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದ.
ಮಲಯಾಳಂ ಮೂಲದ ಒವಿಯಾ, ಕನ್ನಡ, ಮಲಯಾಳಂ, ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಯಶ್ ನಟನೆಯ ‘ಕಿರಾತಕ’ ಹಾಗೂ ‘ಮಿಸ್ಟರ್ ಮೊಮ್ಮಗ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳು ಬಿಗ್ಬಾಸ್ನಲ್ಲಿಯೂ ಭಾಗವಹಿಸಿದ್ದ ಒವಿಯಾ ಸದ್ಯ ತಮಿಳಿನ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.