ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಸದ್ಯ ಹಾಲಿವುಡ್ ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ವೇಳೆ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಸಂದರ್ಭದಲ್ಲಿ ತಾವು ಅನುಭವಿಸಿದ ಕಷ್ಟದ ದಿನಗಳನ್ನು ನೆನಪು ಮಾಡಿಕೊಂಡು ಕಣ್ಣೀರು ಹಾಕಿದ್ದಾರೆ.
ಸಿನಿಮಾ ರಂಗಕ್ಕೆ ಬಂದಾಗ ಅವಮಾನಿಸುತ್ತಿದ್ದರು, ಪಾತ್ರಗಳಿಗೆ ಆಯ್ಕೆ ಮಾಡುತ್ತಿರಲಿಲ್ಲ. ಕೊಟ್ಟ ಪಾತ್ರವನ್ನು ಸರಿಯಾಗಿ ನಿಭಾಯಿಸೋಕೆ ಬಿಡುತ್ತಿರಲಿಲ್ಲ. ಎಷ್ಟೋ ಸಲ ಮನೆಗೆ ಬಂದು ಅತ್ತಿದ್ದೇನೆ. ಈ ರಂಗಕ್ಕೆ ಯಾಕಾದರೂ ಬಂದೆ ಎಂದು ನೊಂದಿದ್ದೇನೆ. ಅಷ್ಟೊಂದು ಕಷ್ಟದಾಯಕ ಸಮಯವದು ಎಂದು ನೋವು ತೋಡಿಕೊಂಡಿದ್ದಾರೆ.
ಕೆಲವು ನಟರ ತಮ್ಮ ಗರ್ಲ್ ಫ್ರೆಂಡ್ ಗಾಗಿ ನನ್ನ ಪಾತ್ರಗಳನ್ನು ಕಸಿದುಕೊಳ್ಳುತ್ತಿದ್ದರು. ಅದು ಮತ್ತೊಂದು ರೀತಿಯ ಹಿಂಸೆ ಆಗಿರುತ್ತಿತ್ತು. ಎಲ್ಲವನ್ನೂ ಸಂಯಮದಿಂದ ನಿಭಾಯಿಸಿಕೊಂಡು ಬಂದೆ. ನಂತರದ ದಿನಗಳಲ್ಲಿ ಅವೆಲ್ಲವೂ ದೂರವಾದವು. ಎಲ್ಲರೂ ನಾನು ಸುಖವಾಗಿ ಜೀವನ ನಡೆಸಿದೆ ಎಂದುಕೊಂಡಿದ್ದಾರೆ. ಅದೆಲ್ಲವೂ ಸುಳ್ಳು. ನಾನೂ ಕಷ್ಟ ಪಟ್ಟಿದ್ದೇನೆ ಎಂದು ಹೇಳಿದ್ದಾರೆ.