ಬೆಂಗಳೂರು: ಕನ್ನಡಕ್ಕಾಗಿ ಕೈ ಎತ್ತು ನಿಮ್ಮ ಕೈ ಕಲ್ಪವೃಕ್ಷವಾಗಲಿದೆ ಅಂತ ರಾಷ್ಟ್ರಕವಿ ಕುವೆಂಪು ಹೇಳಿದ್ರು. ಆದ್ರೆ ಕನ್ನಡಕ್ಕಾಗಿ ಕೈ ಎತ್ತಿದ್ದಕ್ಕೆ ಸರ್ಕಾರ, ಕನ್ನಡ ಪರ ಹೋರಾಟಗಾರರನ್ನ ಜೈಲಿಗೆ ಹಾಕಿದೆ. ಇದು ಕನ್ನಡ ಪರ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದ್ದು,ಬೀದಿಗಿಳಿಯಲು ಸಜ್ಜಯಾಗ್ತಿದ್ದಾರೆ. ಕರವೇ ನಾರಾಯಣ ಗೌಡ ಬಂಧನ ಬೆನ್ನಲ್ಲೇ ಕನ್ನಡಪರ ಹೋರಾಟಗಾರರು ಒಂದಾಗಿ ಖಂಡನಾ ಸಭೆ ನಡೆಸಿ ಬೆಂಗಳೂರು ಬಂದ್ ಎಚ್ಚರಿಕೆ ನೀಡಿದ್ದಾರೆ.
ಜನಿಸು ಬಾ ಮನುಜನೆ ಕನ್ನಡ ಮಣ್ಣಲ್ಲಿ, ಸ್ವರ್ಗವ ಕಾಣುವೇ ನನ್ನ ಈ ಕರುನಾಡಲ್ಲಿ. ಅಳಿದರು ಕನ್ನಡ, ಉಳಿದರು ಕನ್ನಡ, ಎದೆಯನೇ ಸೀಳಿದರು ಹರಿಯುವುದು ಕನ್ನಡ ಅಂತ ಅನ್ಯಭಾಷೆ ನಾಮಫಲಕವನ್ನ ಹೊಡೆದಾಕಿ, ಕಿತ್ತಾಕಿ, ಕಲ್ಲೆತ್ತಾಕಿ ಕನ್ನಡಪರ ಹೋರಾಟಗಾರರು ಆಕ್ರೋಶ ಹೊರಹಾಕಿದ್ರು. ಹೀಗೆ ಬೆಂಗಳೂರಿನಲ್ಲಿ ಅಂಗಡಿಗಳು, ಮಾಲ್ಗಳ ಮೇಲೆ ದಾಳಿ ಮಾಡಿದ್ದ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಸೇರಿದಂತೆ ವಿವಿಧ ಕಾರ್ಯಕರ್ತರನ್ನ ಪೊಲೀಸರು ಬಂಧಿಸಿದ್ರು. ಇದೀಗ ಕರವೇ ಕಾರ್ಯಕರ್ತರ ಬಂಧನದ ಬೆನ್ನಲ್ಲೇ ಕನ್ನಡ ಪರ ಒಕ್ಕೂಟಗಳು ಹಾಗೂ ಸಾಹಿತೆಗಳು ಒಂದಾಗಿ ಸರ್ಕಾರ ವಿರುದ್ದ ಸಮರಕ್ಕೆ ನಿಂತಿದ್ದಾರೆ.
ಹೌದು..,ನಾರಾಯಣಗೌಡ ಹಾಗೂ ಕರವೇ ಕಾರ್ಯಕರ್ತರ ಬಂಧನ ಖಂಡಿಸಿ ಬೆಂಗಳೂರಿನ ವಸಂತನಗರ ಟೆನ್ನಿಸ್ ಕ್ಲಬ್ ನಲ್ಲಿ ಪ್ರವೀಣ್ ಶೆಟ್ಟಿ ನೇತೃತ್ವದಲ್ಲಿ ಖಂಡನಾ ಸಭೆ ನಡೆಯಿತು. ಸಭೆಯಲ್ಲಿ ಸಾ.ರಾ.ಗೋವಿಂದು, ಪ್ರವೀಣ್ ಶೆಟ್ಟಿ, ಶಿವಾನಂದ್ ಶೆಟ್ಟಿ ಸಾಹಿತಿ ದೊಡ್ಡರಂಗೇಗೌಡ, ಹಂಪ ನಾಗರಾಜ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಷಿ ಸೇರಿದಂತೆ ಇತರ ಕನ್ನಡ ಪರ ಸಂಘಟನೆಗಳು ಭಾಗಿಯಾಗಿದ್ರು. ಸಭೆಯಲ್ಲಿ ಐದು ಪ್ರಮುಖ ನಿರ್ಣಗಳನ್ನು ಕೈಗೊಳ್ಳಲಾಯಿತು ಸಭೆಯಲ್ಲಿ ಕೈಗೊಳ್ಳಾದ ನಿರ್ಣಗಳನ್ನ ನೋಡೋದಾದ್ರೆ
ಅಂಗಡಿ ಮುಂಗಟ್ಟುಗಳ ನಾಮಫಲಕ ಕನ್ನಡದಲ್ಲಿ ಅಳವಡಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಸೇರಿದಂತೆ 29 ಕಾರ್ಯಕರ್ತರನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದರು. ಬಂಧಿತ ಎಲ್ಲ ಕರವೇ ಕಾರ್ಯಕರ್ತರಿಗೆ 14 ದಿನಗಳ ಕಾಲ ಅಂದ್ರೆ ಜನವರಿ 10ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ.. ಕರವೇ ಕಾರ್ಯಕರ್ತರ ವಿರುದ್ಧ ಒಟ್ಟು 10 ಎಫ್ಐಆರ್ ದಾಖಲಾಗಿದ್ದು, 53 ಕಾರ್ಯಕರ್ತರನ್ನು ಬಂಧನಕ್ಕೆ ಒಪ್ಪಿಸಲಾಗಿದೆ.ಕೂಡಲೇ ಬಿಡುಗಡೆ ಮಾಡಬೇಕೆಂದು ಕನ್ನಡ ಪರ ಸಂಘಟನೆಗಳು ಹಾಗೂ ಸಾಹಿತಿಗಳು ಆಗ್ರಹಿಸಿದ್ರು
ಇನ್ನು ನಾರಾಯಣಗೌಡ ಬಂಧನ ಖಂಡಿಸಿ ನಾರಾಯಣ ಗೌಡರ ತಾಯಿ ಗೌರಮ್ಮ ಅವರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಗನ ಬಗ್ಗೆ ನೋವಿನ ಮಾತುಗಳನ್ನಾಡಿದ್ದಾರೆ.ಏನಪ್ಪಾ.. ಸಿದ್ದರಾಮಯ್ಯ, ಶಿವಕುಮಾರ್ ನನ್ನ ಮಗ ತಪ್ಪು ಆದರೂ ಏನು ಮಾಡಿದ್ದಾರೆ.ಕರ್ನಾಟಕಕ್ಕಾಗಿ ನಾರಾಯಣಗೌಡ ಎಷ್ಟು ಕಷ್ಟದಲ್ಲಿ ಹೋರಾಡುತ್ತಿದ್ದಾನೆ. ಆರೋಗ್ಯ ಸರಿ ಇಲ್ಲದಿದ್ದರೂ ಕನ್ನಡ ಕನ್ನಡ ಎನ್ನುತ್ತಿದ್ದಾನೆ. ಅಷ್ಟು ಅರಿವಿಲ್ಲವೇ, ನಿಮಗೆ ನಾಚಿಕೆ ಆಗಲ್ವ. ಮಗನನ್ನ ಕರೆದುಕೊಂಡು ಹೋಗಿ ಜೈಲಿಗೆ ಹಾಕಿದ್ದೀರಿ. ಮಗನನ್ನು ಬಿಡದಿದ್ದರೇ ನಾನು ಅನ್ನ ನೀರು ಬಿಟ್ಟು ಸಾಯ್ತಿನಿ. ನನ್ನ ಮಗ ಜೈಲಿನಿಂದ ಹೊರಗೆ ಬರುವವರೆಗೂ ಅನ್ನ, ನೀರು ಏನು ಸೇವಿಸಲ್ಲ ಎಂದು ಗೌರಮ್ಮ ಹೇಳಿದ್ದಾರೆ.
ಕನ್ನಡ ನಾಮಫಲಕ ತೆರವು ವಿಚಾರದಲ್ಲಿ ಕಾನೂನು ಉಲ್ಲಂಘನೆ ಮಾಡಿದ್ದಾರೆ ಅಂತ ಕರವೇ ನಾರಾಯಣ ಗೌಡರಿಗೆ ಜೈಲು ಶಿಕ್ಷೆಯಾಗಿದೆ. ಇತ್ತ ಕನ್ನಡ ಪರ ಸಂಘಟನೆಗಳು ನಾರಾಯಣಗೌಡ ಬೆನ್ನಿಗೆ ನಿಂತು, ಕೂಡಲೇ ನಾರಾಯಣಗೌಡರನ್ನ ಬಿಡುಗಡೆ ಮಾಡಬೇಕು ಅಂತ ಡೆಡ್ಲೈನ್ ಕೊಟ್ಟಿದ್ದಾರೆ. ಇದಕ್ಕೆ ಸರ್ಕಾರ ಸ್ಪಂದಿಸುತ್ತಾ? ನಾರಾಯಣಗೌಡರನ್ನ ರಿಲೀಸ್ ಮಾಡುತ್ತಾ ಕಾದು ನೋಡಬೇಕಿದೆ.