ಮೈಸೂರು : ಪಿಎಸ್ಐ ಹಗರಣ, ಬಿಟ್ ಕಾಯಿನ್ ವಿಚಾರ, 40 ಪರ್ಸೆಂಟ್ ವಿಚಾರ ಹಾಗೂಚಾಮರಾಜನಗರ ಆಕ್ಸಿಜನ್ ದುರಂತ ಎಲ್ಲರದ ಬಗ್ಗೆ ತನಿಖೆ ಮಾಡಿ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ (Pratap simha)ಒತ್ತಾಯಿಸಿದ್ದಾರೆ.ತಪ್ಪಿತಸ್ಥರನ್ನು ಹಿಡಿದು ಜೈಲಿಗೆ ಹಾಕಿ.ಕಾಂಗ್ರೆಸ್ ನವರು ಹೇಳಿದ್ದೆಲ್ಲಾ ಸತ್ಯ.ನೀವು ಸತ್ಯ ಸಂಧರು ಎಂಬುದನ್ನ ಸಾಬೀತು ಮಾಡಿ.
ನಮ್ಮ ಪಕ್ಷದಲ್ಲಿ ಬಿಜೆಪಿಯವರೇ ತಪ್ಪು ಮಾಡಿದರೂ ಅವರನ್ನ ಹಿಡಿದು ಜೈಲಿಗೆ ಹಾಕಿ. ಈ ಮೂಲಕ ನಮ್ಮ ಪಕ್ಷವನ್ನ ಸ್ವಚ್ಚ ಮಾಡಲು ಅನುವು ಮಾಡಿಕೊಡಿ. ನೀವು ಬಿಜೆಪಿ ಸರ್ಕಾರದ ಮೇಲೆ ಏನೇನು ಆರೋಪ ಮಾಡಿದ್ದೀರೊ ಆವೆಲ್ಲದರ ಬಗ್ಗೆಯೂ ತುರ್ತು ತನಿಖೆ ಮಾಡಿ.ನಿಮ್ಮ ಮೇಲೆ ಜನ ಅತೀವ ವಿಶ್ವಾಸ ಇಟ್ಟಿದ್ದಾರೆ.ಆ ವಿಶ್ವಾಸವನ್ನ ಉಳಿಸಿಕೊಳ್ಳಿ ಎಂದು ಆಗ್ರಹಿಸಿದರು.