ಸಿನಿಮಾ ರಂಗಕ್ಕೂ ರಾಜಕೀಯಕ್ಕೂ ಹತ್ತಿರದ ನಂಟು. ಈಗಾಗ್ಲೆ ಸಾಕಷ್ಟು ನಟ, ನಟಿಯರು ರಾಜಕೀಯಕ್ಕೆ ಎಂಟ್ರಿಕೊಟ್ಟು ಸಕ್ಸಸ್ ಕಂಡಿದ್ದಾರೆ. ಇನ್ನೂ ಕೆಲವರು ರಾಜಕೀಯಕ್ಕೆ ಕಾಲಿಟ್ಟು ಅಷ್ಟೇ ಬೇಗ ಹಿಂದೆ ಸರಿದಿದ್ದಾರೆ. ಇದೀಗ ಕನ್ನಡದ ಖ್ಯಾತ ನಿರ್ಮಾಪಕ ಕೆ. ಮಂಜು ರಾಜಕೀಯಕ್ಕೆ ಎಂಟ್ರಿಕೊಡ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಿನಿಮಾರಂಗದ ಹಲವರು ಸಜ್ಜಾಗಿದ್ದಾರೆ. ಯಾವ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಸಿಗಲಿದೆ ಎಂಬುದು ಶೀಘ್ರದಲ್ಲೇ ಬಹಿರಂಗ ಆಗಲಿದ್ದು, ಈ ನಡುವೆ ನಿರ್ಮಾಪಕ ಕೆ. ಮಂಜು ಅವರು ರಾಜಕಾರಣಕ್ಕೆ ಎಂಟ್ರಿ ನೀಡುವ ಸೂಚನೆ ಸಿಕ್ಕಿದೆ.
ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದಿಂದ ಕೆ. ಮಂಜು ಸ್ಪರ್ಧಿಸುವ ಸಾಧ್ಯತೆ ದಡ್ಡವಾಗಿದೆ. ಈ ಬಗ್ಗೆ ಮಂಜು ಶೀಘ್ರದಲ್ಲೇ ಅಧಿಕೃತ ಮಾಹಿತಿ ನೀಡಲಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತಂತೆ ಚರ್ಚಿಸಲು ಅವರು ಶೀಘದಲ್ಲೇ ಕೆಲವು ರಾಜಕೀಯ ಮುಖಂಡರ ಜೊತೆ ಮಾತುಕತೆ ನಡೆಸಲಿದ್ದಾರೆ.
ರಾಜಕೀಯ ಎಂಟ್ರಿ ಕುರಿತು ಮಾತನಾಡಿರುವ ಮಂಜು, ‘ನಮ್ಮ ಕೆಲವು ನಾಯಕರನ್ನ ಭೇಟಿ ಮಾಡುತ್ತೇನೆ. ಶೀಘ್ರದಲ್ಲೇ ಎಲ್ಲವೂ ಫೈನಲ್ ಆಗುತ್ತದೆ. ಪದ್ಮನಾಭ ನಗರದಲ್ಲಿ ಒಕ್ಕಲಿಗರ ಮತಗಳು ಜಾಸ್ತಿ ಇವೆ. ನನಗೆ ಹಲವು ನಾಯಕರ ಬೆಂಬಲ ಸಿಗುವ ಸಾಧ್ಯತೆ ಇದೆ ಎಂದಿದ್ದಾರೆ.