ಗೆಳತಿ ಪವಿತ್ರಾ ಗೌಡಗೆ ಮೆಸೇಜ್ ಮಾಡಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗು ಮೂಲದ ರೇಣುಕಾಸ್ವಾಮಿಯನ್ನು ನಟ ದರ್ಶನ್ ಎಂಡ್ ಗ್ಯಾಂಗ್ ಕೊಲೆ ಮಾಡಿದ್ದಾರೆ. ಇದೀಗ ಘಟನೆಯಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಗೆ ಖೈದಿ ನಂಬರ್ 6106 ನೀಡಲಾಗಿದ್ದು ಈ ನಂಬರ್ ಗೆ ಸಾಕಷ್ಟು ಡಿಮ್ಯಾಂಡ್ ಕೇಳಿ ಬರ್ತಿದೆ.
ದರ್ಶನ್ ಗೆ ವಿಚಾರಣಾಧಿನ ಖೈದಿ 6106 ನಂಬರ್ ಕೊಡಲಾಗಿದೆ. ಈ ನಂಬರ್ ಅನ್ನು ಹೊಸ ಸಿನಿಮಾಗೆ ಶೀರ್ಷಿಕೆಯಾಗಿಸಲು ಭದ್ರಾವತಿ ಮೂವೀ ಮೇಕರ್ಸ್ ನಿರ್ಮಾಪಕರು ಬೇಡಿಕೆ ಇಟ್ಟಿದ್ದಾರೆ. ಆದ್ರೆ ಈ ಕೇಸ್ ಈಗ ತನಿಖೆ ಹಂತದಲ್ಲಿ ಇರುವ ಹಿನ್ನೆಲೆ ಈ ಕೇಸ್ ಗೆ ಸಂಬಂಧಿಸಿದ ಟೈಟಲ್ ಗಳನ್ನು ನೀಡದಿರಲು ವಾಣಿಜ್ಯ ಮಂಡಳಿ ತೀರ್ಮಾನಿಸಿದೆ.
ಯಾವುದೇ ಸಿನಿಮಾ ಮಾಡಬೇಕು ಎಂದ್ರು ಮೊದಲು ಶೀರ್ಷಿಕೆಯನ್ನು ನೋಂದಣಿ ಮಾಡಿಕೊಳ್ಳಬೇಕು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆ ಟೈಟಲ್ ಗೆ ಗ್ರೀನ್ ಸಿಗ್ನಲ್ ಕೊಟ್ಟ ಬಳಿಕವಷ್ಟೇ ಸಿನಿಮಾ ಮಾಡಲು ಸಾಧ್ಯ. ಈಗ ಖೈದಿ ನಂಬರ್ 6106 ಟೈಟಲ್ ಗೆ ಬೇಡಿಕೆ ಹೆಚ್ಚಿದೆ. ಆದ್ರೆ ವಾಣಿಜ್ಯ ಮಂಡಳಿ ಟೈಟಲ್ ಅನ್ನು ಸದ್ಯಕ್ಕೆ ಯಾರಿಗೂ ಕೊಡದಿರಲು ನಿರ್ಧರಿಸಿದೆ.
ಕೆಲ ದಿನಗಳ ಹಿಂದೆ ‘ಡಿ ಗ್ಯಾಂಗ್’ ಎಂಬ ಶೀರ್ಷಿಕೆಗೆ ಬೇಡಿಕೆ ಬಂದಿತ್ತು. ಈಗ ದರ್ಶನ್ ಅವರಿಗೆ ನೀಡಿದ ಖೈದಿ ನಂಬರ್ ನಲ್ಲೂ ಸಿನಿಮಾ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ. ಕೆಲವು ಅಭಿಮಾನಿಗಳ ಇದೇ ನಮ್ಮ ಲಕ್ಕಿ ನಂಬರ್ ಅಂತಿದ್ದಾರೆ. ‘ಖೈದಿ ನಂಬರ್ 6106’ ಎಂದು ಸ್ಟಿಕ್ಕರ್ ಅಂಟಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ.