ಮಂಡ್ಯ: ಇಂದು ಉಸ್ತುವಾರಿ ಸಚಿವರಿಂದ ಮೊದಲ ಪ್ರಗತಿ ಪರಿಶೀಲನಾ ಸಭೆ ಏರ್ಪಡಿಸಲಾಗಿದ್ದು, ಸಚಿವರಾದ ಬಳಿಕ ಜಿಲ್ಲಾ ಮಟ್ಟದ ಕೆಡಿಪಿ ಸಭೆ ನಡೆಸುತ್ತಿರುವ ಚಲುವರಾಯಸ್ವಾಮಿ, ಸಭೆಯಲ್ಲಿ ಪ್ರಮುಖ ವಿಚಾರಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಿದ್ದಾರೆ.. KRS ಡ್ಯಾಂ ವಸ್ತು ಸ್ಥಿತಿ, ರೈತರ ಪರಿಸ್ಥಿತಿ, ಅಕ್ರಮ ಗಣಿಗಾರಿಕೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಮಂಡ್ಯದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಕೆಡಿಪಿ ಸಭೆ ಆಯೋಜನೆ ಮಾಡಿದ್ದು, ಸಂಸದೆ ಸುಮಲತಾ ಸೇರಿದಂತೆ ಜಿಲ್ಲೆ ಎಲ್ಲಾ ಶಾಸಕರೂ ಭಾಗಿ ಸಾಧ್ಯತೆ ಇದೆ. ಕಳೆದ ಅವಧಿಯಲ್ಲಿ ಸುಮಲತಾ ಭಾಗಿಯಾದ ಸಭೆಗಳಲ್ಲಿ ಗದ್ದಲ ಸೃಷ್ಟಿಸುತ್ತಿದ್ದ ಜೆಡಿಎಸ್ ಶಾಸಕರು. ಈ ಬಾರಿ ಕಾಂಗ್ರೆಸ್ ಶಾಸಕರ ಪಾರುಪತ್ಯದಲ್ಲಿ ಸುಮಲತಾ ನಡೆ ನಿಗೂಢವಾಗಿದ್ದು, ಇಂದಿನ ಸಭೆಯಲ್ಲಿ ಭಾಗಿಯಾಗಲಿದ್ದಾರಾ ರೆಬೆಲ್ ಲೇಡಿ ಸುಮಕ್ಕ ಎಂದು ಕಾದು ನೋಡಬೇಕಿದೆ.