ಬೆಂಗಳೂರು:ಆಸ್ತಿ ತೆರಿಗೆ ಬಾಕಿಯನ್ನು ಪಾವತಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಅವಕಾಶ ನೀಡಿದ್ದರೂ, ಕೆಲವೇ ಕೆಲವು ಮಂದಿ ಮಾತ್ರ ಇದರ ಉಪಯೋಗ ಪಡದುಕೊಂಡಿದ್ದಾರೆ.
OTS ಅಡಿಯಲ್ಲಿ, BBMP ದಂಡದ ಮೊತ್ತದ ಮೇಲೆ ಶೇಕಡಾ 50 ರಷ್ಟು ರಿಯಾಯಿತಿ ಮತ್ತು ಬಡ್ಡಿ ಮೊತ್ತದ ಶೇಕಡಾ 100 ರಷ್ಟು ಸಡಿಲಿಕೆಯನ್ನು ನೀಡುತ್ತದೆ. ಆದಾಗ್ಯೂ, 3.95 ಲಕ್ಷ ತೆರಿಗೆ ಬಾಕಿದರರಲ್ಲಿ, ಕೇವಲ ಶೇ. 20 ರಷ್ಟು ಜನರು ಮಾತ್ರ ಪ್ರಯೋಜನವನ್ನು ಪಡೆದಿದ್ದಾರೆ. ಬಿಬಿಎಂಪಿಯು 733.71 ಕೋಟಿ ರೂ.ಗಳ ತೆರಿಗ ಬಾಕಿ ಸಂಗ್ರಹಿಸುವ ಗುರಿ ಹೊಂದಿತ್ತು ಆದರೆ ಕೇವಲ 100 ಕೋಟಿ ರೂ ಮಾತ್ರ ಸಂಗ್ರಹವಾಗಿದೆ. OTS ಯೋಜನೆಯು ಜುಲೈ 31 ರಂದು ಕೊನೆಗೊಳ್ಳಲ್ಲಿದ್ದು ಅದಾದ ನಂತರ, ಬಿಬಿಎಂಪಿ ವಸೂಲಿ ಪ್ರಾರಂಭಿಸುತ್ತದೆ.
ಏಪ್ರಿಲ್ 1 ರವರೆಗೆ ಲಭ್ಯವಿರುವ ಮಾಹಿತಿಯ ಪ್ರಕಾರ, ಬಿಬಿಎಂಪಿಯ ಮಹದೇವಪುರ ವಲಯವು 83,330 ಆಸ್ತಿಗಳೊಂದಿಗೆ ತೆರಿಗೆ ಸುಸ್ತಿದಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ, ನಂತರ ಬೊಮ್ಮನಹಳ್ಳಿ ವಲಯ 62,226 ಆಸ್ತಿಗಳೊಂದಿಗೆ ಮತ್ತು ರಾಜರಾಜೇಶ್ವರಿ ನಗರ ವಲಯವು 59,419 ಆಸ್ತಿಗಳೊಂದಿಗೆ 3ನೇ ಸ್ಥಾನ ಪಡೆದಿದೆ.