ಇರಾಕ್ ಸಂಸತ್ತಿನಲ್ಲಿ ಪ್ರಸ್ತಾವಿತ ಮಸೂದೆಯೊಂದು ವ್ಯಾಪಕ ಆಕ್ರೋಶ ಹಾಗೂ ಕಳವಳಕ್ಕೆ ಕಾರಣವಾಗಿದೆ. ಇರಾನ್ ನ ಹೊಸ ಮಸೂದೆಯಲ್ಲಿ ಹೆಣ್ಣುಮಕ್ಕಳ ಮದುವೆ ವಯಸ್ಸನ್ನು 9 ವರ್ಷಕ್ಕೆ ಇಳಿಸಲು ಮಾತುಕತೆ ನಡೆಯುತ್ತಿದೆ. ಆದರೆ ಈ ಮಸೂದೆ ಬಗ್ಗೆ ಪ್ರತಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇರಾಕ್ ನ್ಯಾಯ ಸಚಿವಾಲಯವು ಪರಿಚಯಿಸಿದ ವಿವಾದಾತ್ಮಕ ಶಾಸನವು, ದೇಶದ ವೈಯಕ್ತಿಕ ಸ್ಥಿತಿಯ ಕಾನೂನನ್ನು ತಿದ್ದುಪಡಿ ಮಾಡುವ ಗುರಿಯನ್ನು ಹೊಂದಿದೆ. ಈಗಾಗಲೇ ಇರುವ ಕಾನೂನು ಮದುವೆಗೆ ಕನಿಷ್ಠ ವಯಸ್ಸನ್ನು 18 ಕ್ಕೆ ನಿಗದಿಪಡಿಸುತ್ತದೆ.
ಮಾನವ ಹಕ್ಕುಗಳ ಸಂಘಟನೆಗಳು, ಮಹಿಳಾ ಗುಂಪುಗಳು ಮತ್ತು ನಾಗರಿಕ ಸಮಾಜದ ಕಾರ್ಯಕರ್ತರು ಈ ಮಸೂದೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಯುವತಿಯರ ಶಿಕ್ಷಣ, ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಬೀರಬಹುದಾದ ಗಂಭೀರ ಪರಿಣಾಮಗಳ ಬಗ್ಗೆ ಎಚ್ಚರಿಸಿದ್ದಾರೆ.
ವಿಶ್ವಸಂಸ್ಥೆಯ UNICEF ಪ್ರಕಾರ, ಇರಾಕ್ನಲ್ಲಿ 28% ಹುಡುಗಿಯರು ಈಗಾಗಲೇ 18 ವರ್ಷಕ್ಕಿಂತ ಮುಂಚೆಯೇ ಮದುವೆಯಾಗಿದ್ದಾರೆ. ಈ ಕಾನೂನನ್ನು ಅಂಗೀಕರಿಸುವುದರಿಂದ ದೇಶವು ಮತ್ತೆ ಹಿಂದಿನ ಕಾಲದ ಸಂಪ್ರದಾಯಕ್ಕೆ ಜೋತುಬಿದ್ದಂತಾಗುತ್ತದೆ ಎಂದು ಹ್ಯೂಮನ್ ರೈಟ್ಸ್ ವಾಚ್ ಸಂಶೋಧಕಿ ಸಾರಾ ಸಾನ್ಬರ್ ಅಭಿಪ್ರಾಯಪಟ್ಟಿದ್ದಾರೆ.