ಮಹಾರಾಷ್ಟ್ರದ ಪಂಚತಾರಾ ಹೋಟೆಲ್ವೊಂದರಲ್ಲಿ (Hotel) ವೇಶ್ಯಾವಾಟಿಕೆ ನಡೆಸುತ್ತಿದ್ದ ದಂಧೆಯನ್ನು ಪುಣೆ ಪೊಲೀಸರು (Pune Police) ಬೇಧಿಸಿದ್ದಾರೆ. ಅತ್ಯಂತ ಗುಪ್ತ್ ಗುಪ್ತ್ ಆಗಿ ನಡೆಸುತ್ತಿದ್ದ ವ್ಯವಹಾರವನ್ನು ವಕಾಡ್ ಪ್ರದೇಶದಲ್ಲಿ ಪತ್ತೆಹಚ್ಚಿದ್ದಾರೆ. ವೇಶ್ಯಾವಾಟಿಕೆ ಗ್ಯಾಂಗ್ ದಂಧೆ ನಡೆಸುತ್ತಿ ವೇಳೆ ಪೊಲೀಸರು ದಾಳಿ ನಡೆಸಿದಾಗ ಭೋಜ್ಪುರಿ ನಟಿಯೂ (Bhojpuri Actress) ಆ ವೇಶ್ಯಾವಾಟಿಕೆಯಲ್ಲಿ (Prostitution) ಭಾಗಿಯಾಗಿರುವುದು ಪತ್ತೆಯಾಗಿದೆ.
ಜೊತೆಗೆ ಮತ್ತೊಬ್ಬ ಮಾಡೆಲ್ ಮತ್ತು ಏಜೆಂಟ್ ನನ್ನು ಬಂಧಿಸಲಾಗಿದೆ. ವಾರಂತ್ಯಕ್ಕೆ ಶುಕ್ರವಾರ ಸಂಜೆ ಪಂಚತಾರಾ ಹೋಟೆಲ್ನಲ್ಲಿ ಕೆಲವು ಅಸಾಮಾಜಿಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಅದರಂತೆ ನಟಿ ಮತ್ತು ಮಾಡೆಲ್ ವೇಶ್ಯಾವಾಟಿಕೆ ನಡೆಸುತ್ತಿದ್ದಾಗ ರೆಡ್ ಹ್ಯಾಂಡ್ಆಗಿ ಸಿಕ್ಕಿಬಿದ್ದರು ಎಂದು ವಕಾಡ್ ಪೊಲೀಸ್ ಠಾಣೆಯ ತನಿಖಾಧಿಕಾರಿ ದೇವೆನ್ ಚವಾಣ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ದೇವೆನ್ ಚವಾಣ್ “ಮೊದಲು ನಾವು ಗುಪ್ತ್ ಗುಪ್ತ್ ಆಗಿ ಆನ್ಲೈನ್ನಲ್ಲಿ ಸಂಪರ್ಕಿಸಿ ಹೋಟೆಲ್ ರೂಮ್ ಅನ್ನು ಬುಕ್ ಮಾಡಿದೆವು. ನಂತರ ನಾವು ಪೊಲೀಸ್ ಇಲಾಖೆಯಿಂದ ಡಮ್ಮಿ ಗ್ರಾಹಕರನ್ನು ಹೋಟೆಲಿಗೆ ಕಳುಹಿಸಿದ್ದೆವು. ಡಮ್ಮಿ ಗ್ರಾಹಕರು ಹೋಟೆಲಿಗೆ ಪ್ರವೇಶಿಸಿದ ನಂತರ ಅವರು ತಮ್ಮ ಸೆಲ್ ಫೋನ್ಗಳಲ್ಲಿ ನಟಿ ಮತ್ತು ಮಾಡೆಲ್ನ ಫೋಟೋಗಳನ್ನು ತೆಗೆದುಕೊಂಡು ನಮಗೆ ಕಳುಹಿಸಿದರು.
ವೇಶ್ಯಾವಾಟಿಕೆ ನಡೆಯುತ್ತಿರುವ ವಿಷಯ ದೃಢಪಡುತ್ತಿದ್ದಂತೆ ಅಪರಾಧ ವಿಭಾಗದ ಪೊಲೀಸರು ಹೋಟೆಲ್ ಮೇಲೆ ದಾಳಿ ಮಾಡಿದರು. ಈ ವೇಳೆ ವೇಶ್ಯಾವಾಟಿಕೆ ದಂಧೆಗೆ ಸಹಕರಿಸುತ್ತಿದ್ದ ಮೂವರು ವಿಟಪುರುಷರನ್ನೂ ಸಹ ಬಂಧಿಸಲಾಗಿದೆ ಎಂದು ಚವಾಣ್ ಹೇಳಿದ್ದಾರೆ. ಆರೋಪಿಗಳನ್ನು ಪ್ರಬೀರ್ ಪಿ ಮಜುಂದಾರ್, ದಿನೇಶ್ ಯಾದವ್ ಮತ್ತು ವಿರಾಜ್ ಯಾದವ್ ಎಂದು ಪೊಲೀಸರು ಗುರುತಿಸಿದ್ದಾರೆ.