ಭಾನುವಾರ ಸಂಜೆ ಜಮ್ಮು ಕಾಶ್ಮೀರದ ರಿಯಾಸಿಯಲ್ಲಿ ಮಾತಾ ವೈಷ್ಣೋದೇವಿ ದೇವಾಲಯದಿಂದ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಪಾಕಿಸ್ತಾನಿ ಉಗ್ರರು ಗುಂಡಿನ ದಾಳಿನಡೆಸಿದ್ದಾರೆ. ಇದರಿಂದ ಬಸ್ ಕಣಿವೆಗೆ ಉರುಳಿಬಿದ್ದು 9 ಜನ ಸಾವನ್ನಪ್ಪಿದ್ದರು. ಘಟನೆಯ ಕುರಿತು ನೆದರ್ಲ್ಯಾಂಡ್ಸ್ನ ಬಲಪಂಥೀಯ ಪಿವಿವಿ ಫ್ರೀಡಂ ಪಾರ್ಟಿಯ ಮುಖ್ಯಸ್ಥ ಗೀರ್ಟ್ ವೈಲ್ಡರ್ಸ್ ಪ್ರತಿಕ್ರಿಯಿಸಿದ್ದಾರೆ.
‘ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನಿ ಭಯೋತ್ಪಾದಕರಿಗೆ ಹಿಂದೂಗಳನ್ನು ಕೊಲ್ಲಲು ಬಿಡಬೇಡಿ. ನಿಮ್ಮ ಜನರನ್ನು ಭಾರತವನ್ನು ರಕ್ಷಿಸಿಕೊಳ್ಳಿ!’ ಎಂದು ವೈಲ್ಡರ್ಸ್ ಸಾಮಾಜಿಕ ಮಾಧ್ಯಮ ಸೈಟ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ವೈಲ್ಡರ್ಸ್ ಹಲವಾರು ಸಂದರ್ಭಗಳಲ್ಲಿ ಪಾಕಿಸ್ತಾನದಲ್ಲಿ ಭಯೋತ್ಪಾದನೆಯ ವಿಷಯವನ್ನು ಎತ್ತಿ ತೋರಿಸಿದ್ದಾರೆ. ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರವಾದ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಎರಡರಲ್ಲೂ ಹಿಂದೂಗಳ ದುಃಸ್ಥಿತಿಯನ್ನು ಎತ್ತಿ ತೋರಿಸಿದ್ದಾರೆ.
‘ನಾನು ಪಾಕಿಸ್ತಾನ ಮತ್ತು ಅರಬ್ ಇಮಾಮ್ಗಳಿಂದ ಹಲವಾರು ಫತ್ವಾಗಳನ್ನು ಸ್ವೀಕರಿಸಿದ್ದೇನೆ, ಆದರೆ ನಾನು ಹೆದರುವುದಿಲ್ಲ’ ಎಂದು ಗೀರ್ಟ್ ವೈಲ್ಡರ್ಸ್ ಕಳೆದ ವರ್ಷ ಹೇಳಿದ್ದರು.
ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ 9 ಜನರು ಸಾವನ್ನಪ್ಪಿದ್ದರು. ಬಲಿಯಾದವರಲ್ಲಿ 2 ವರ್ಷದ ಬಾಲಕ ಸೇರಿದಂತೆ ನಾಲ್ವರು ರಾಜಸ್ಥಾನದ ಸ್ಥಳೀಯರು ಮತ್ತು ಮೂವರು ಉತ್ತರ ಪ್ರದೇಶದವರು ಇದ್ದಾರೆ. 41 ಯಾತ್ರಾರ್ಥಿಗಳಲ್ಲಿ ಗುಂಡೇಟಿನಿಂದ ಗಾಯಗೊಂಡ 10 ಜನರು ಉತ್ತರ ಪ್ರದೇಶದವರಾಗಿದ್ದಾರೆ. ಗಾಯಾಳುಗಳು ಜಮ್ಮು ಮತ್ತು ರಿಯಾಸಿ ಜಿಲ್ಲೆಗಳ 3 ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರ ಸಂಜೆ 6.10ರ ಸುಮಾರಿಗೆ ರಿಯಾಸಿ ಜಿಲ್ಲೆಯಲ್ಲಿ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು, 9 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.